ಬೆಂಗಳೂರು/ಬೀದರ್: ದಿವಂಗತ ಪುನೀತ್ ರಾಜಕುಮಾರ್ ಅವರ ಒಂದು ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್ ಬಳಿ ಕನ್ನಡ ಯೋಗಿ ಎಂಬ ಅಭಿಮಾನಿ ಅನ್ನದಾನ ಕಾರ್ಯಕ್ರಮ ನಡೆಸಿದ್ದಾರೆ. ಈ ಮೂಲಕ ಪುನೀತ್ ಅವರಿಗೆ ವಿಶೇಷ ನಮನ (Appu Namana) ಸಲ್ಲಿಸಿದ್ದಾರೆ.
ಅನ್ನದಾನದ ಜತೆಗೆ ಅನಾಥ ಮಕ್ಕಳಿಗೆ ಉಚಿತ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶ್ರೀರಾಮಪುರದ ಅನಾಥ ಆಶ್ರಮದ 70ಕ್ಕೂ ಅಧಿಕ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಅಪ್ಪು ಅಭಿಮಾನಿಗಳಿಂದ ಸಾಮೂಹಿಕ ರಕ್ತದಾನ ಶಿಬಿರ
ಅಪ್ಪು ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಿಕೆಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ರಕ್ತ ದಾನ ಮಾಡಿದ್ದಾರೆ.
ಕಾಲೇಜಿನ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಿ ಪುನೀತ್‌ಗೆ ಗೌರವ ಸಲ್ಲಿಸುತ್ತಿದ್ದಾರೆ. ಭಾಲ್ಕಿಯ ಯುವ ಮುಖಂಡ ಸಾಗರ ಖಂಡ್ರೆ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದ್ದು, ಬಸವಲಿಂಗ ಪಟ್ಟದ್ದೆವರು ಸೇರಿ ಅನೇಕ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.
ಇದನ್ನೂ ಓದಿ | Appu Namana| ಅಪ್ಪುವಿಗಾಗಿ ಬೃಹತ್ ರುದ್ರಾಕ್ಷಿ ಹಾರ ತಂದ ನಾರಾಯಣಪುರ ಗ್ರಾಮಸ್ಥರು, ಮಂತ್ರಾಲಯದಲ್ಲಿ ಟಿಫಿನ್