Site icon Vistara News

Appu Namana| ಅಪ್ಪುವಿಗಾಗಿ ಬೃಹತ್‌ ರುದ್ರಾಕ್ಷಿ ಹಾರ ತಂದ ನಾರಾಯಣಪುರ ಗ್ರಾಮಸ್ಥರು, ಮಂತ್ರಾಲಯದಲ್ಲಿ ಟಿಫಿನ್

rudrakshi

ಬೆಂಗಳೂರು: ಪುನೀತ್ ರಾಜಕುಮಾರ್‌ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಗೆ ಬಂದಿರುವ ಅಭಿಮಾನಿಗಳು ಒಬ್ಬೊಬ್ಬರೂ ಒಂದೊಂದು ವಸ್ತುಗಳನ್ನು ತಂದು ಅರ್ಪಿಸುತ್ತಿದ್ದಾರೆ. ಹೋಳಿಗೆ, ಹಣ್ಣು, ಹೂವಿನ ಹಾರ, ಜೋಳ ರೊಟ್ಟಿ ಹೀಗೆ ನಾನಾ ವಸ್ತುಗಳನ್ನು ತಂದಿದ್ದಾರೆ. ಕೆಲವರು ಅಲ್ಲೇ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಮೂರು ದೊಡ್ಡ ಗಾತ್ರದ ರುದ್ರಾಕ್ಷಿ ಹಾರಗಳನ್ನು ತಂದಿದ್ದಾರೆ. ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಸಮಾಧಿಗೆ ಹಾಕುವುದಕ್ಕಾಗಿ ರುದ್ರಾಕ್ಷಿ ಹಾರವನ್ನು ತಂದಿದ್ದಾರೆ. ರವಿ ಬಸವಣ್ಣಪ್ಪ ಬಂಕಾಪುರ ಅವರ ನೇತೃತ್ವದಲ್ಲಿ ಹಾರ ತರಲಾಗಿದೆ.

ರುದ್ರಾಕ್ಷಿ ಹಾರ ತಂದ ತಂಡ

ತುಂಗಾ ತೀರದಲ್ಲಿ ಮಾರ್ನಿಂಗ್‌ ಟಿಫಿನ್‌
ಪುನೀತ್‌ಗೂ ಮಂತ್ರಾಲಯಕ್ಕೂ ಅಗಾಧ ನಂಟಿದೆ. ರಾಯರ ಭಕ್ತರಾಗಿರುವ ಪುನೀತ್‌ ಆಗಾಗ ಇಲ್ಲಿಗೆ ಬರುತ್ತಿದ್ದರು. ಅಪ್ಪುವಿನ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಮಂತ್ರಾಲಯದಲ್ಲಿ ಮುಂಜಾನೆ ಟಿಫಿನ್ ವ್ಯವಸ್ಥೆ ಮಾಡಿದ್ದಾರೆ.

ರಾಯಚೂರು ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಸೇವಾ ಕಾರ್ಯ ನಡೆದಿದ್ದು, ಸುಮಾರು 200-300 ಜನ ನಿರ್ಗತಿಕರಿಗೆ ಬೆಳಗ್ಗಿನ ಉಪಹಾರ ನೀಡಲಾಗಿದೆ. ಗಂಧದ ಗುಡಿ ಸಿನಿಮಾ ತುಂಗಭದ್ರಾ ನದಿ ತಟದಲ್ಲಿ ಚಿತ್ರೀಕರಣ ನಡೆದಿದ್ದು ಅಲ್ಲೇ ಉಪಹಾರ ವ್ಯವಸ್ಥೆ ಮಾಡಲಾಯಿತು. ಪಲಾವ್, ಬಾಳೆಹಣ್ಣು, ಚಟ್ನಿ, ವಾಟರ್ ಬಾಟಲ್ ವಿತರಿಸಲಾಯಿತು.

ಇದನ್ನೂ ಓದಿ | Appu Namana | 500 ಕಿ.ಮೀ. ದೂರದ ಮನಗುಂಡಿಯಿಂದ ಕಾಲ್ನಡಿಗೆಯಲ್ಲಿ ಬಂದು ತಲುಪಿದ ಅಥ್ಲೀಟ್‌ ದಾಕ್ಷಾಯಿಣಿ

Exit mobile version