Site icon Vistara News

Appu Namana | ಕಲಾವಿದರ ಕೈ ಚಳಕದಿಂದ ಮೂಡಿ ಬಂತು ಪುನೀತ್‌ ಭಾವಚಿತ್ರ

appu namana

ಬೆಂಗಳೂರು: ಡಾ. ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನ ತಂದ ನೋವು ವರ್ಷ ಕಳೆದರೂ ಕಡಿಮೆ ಆಗಿಲ್ಲ. ಅಪ್ಪು ಅಗಲಿ ಇಂದಿಗೆ (ಅ.೨೯) ಒಂದು ವರ್ಷ ಕಳೆದಿದೆ. ಅಪ್ಪು ಸ್ಮರಣಾರ್ಥ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ನೆನಪು ಮಾಡಿಕೊಂಡು (Appu Namana) ನಮಿಸಿದ್ದಾರೆ.

ಬೆಂಗಳೂರಿನ ಕಲಾವಿದ ಸೆಂದಿಲ್ ಕುಮಾರ್‌ ಅಪ್ಪುಗೆ ಕಲಾ ನಮನ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಕಲಾವಿದ ಸೆಂದಿಲ್‌, 46 ಕಲ್ಲಂಗಡಿ ಹಣ್ಣುಗಳಲ್ಲಿ 46 ರೀತಿಯಲ್ಲಿ ವಿವಿಧ ಮುಖಭಾವದ ಪುನೀತ್‌ ಭಾವಚಿತ್ರವನ್ನು ವಿನ್ಯಾಸಗೊಳಿಸಿದ್ದಾರೆ.

ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗಿನ ಪುನೀತ್ ಅಭಿಮಾನದ ಚಿತ್ರಗಳ ‌ಮುಖಭಾವಗಳನ್ನು‌ ಕಲ್ಲಂಗಡಿ ಹಣ್ಣಿನ ಮೇಲೆ ಕೆತ್ತನೆ ಮಾಡಿದ್ದಾರೆ. ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳಿಗೆ ಕಲ್ಲಂಗಡಿ ಕೆತ್ತನೆ ಕಲೆ ಗಮನ ಸೆಳೆಯುತ್ತಿದೆ.

ಅಪ್ಪುವಿನ ಬೆಣ್ಣೆಯಂತಹ ಪುತ್ಥಳಿ
ಪುನೀತ್‌ ರಾಜಕುಮಾರ್‌ ಸ್ಮರಣಾರ್ಥ ಅವರಿಗೆ ಗೌರವ ಸಲ್ಲಿಸಲು 46 ಕೆಜಿ ಬೆಣ್ಣೆಯಲ್ಲಿ ಅಪ್ಪು ಪುತ್ಥಳಿ ಕೆತ್ತನೆ ಮಾಡಲಾಗಿದೆ. ಬೆಂಗಳೂರಿನ ಚೆನ್ನೈಸ್ ಅಮೃತಾ ಕಲಾ ಸಂಸ್ಥೆಯ ಕಲಾವಿದರು ತಮ್ಮ ಕೈ ಚಳಕದಿಂದ ಬೆಣ್ಣೆಯಿಂದ ನಗುಮೊಗದ ಪುನೀತ್ ಪುತ್ಥಳಿ ನಿರ್ಮಿಸಿದ್ದಾರೆ. ಅಪ್ಪು ಸಮಾಧಿ ಬಳಿ ಬೆಣ್ಣೆಯಿಂದ ವಿನ್ಯಾಸಗೊಳಿಸಿರುವ ಪುತ್ಥಳಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬಣ್ಣದಲ್ಲಿ ಮೂಡಿದ ರಾಜ್‌ಕುಮಾರ
ಕಲಾವಿದೆ ರೂಪಶ್ರೀ ಎಂಬುವವರು ಸುಮಾರು 15 ದಿನಗಳ ಸಮಯ ತೆಗೆದುಕೊಂಡು ಪುನೀತ್‌ ಪೇಂಟಿಂಗ್‌ ಮಾಡಿದ್ದಾರೆ.

ಪುನೀತ್‌ ಭುಜದ ಮೇಲೆ ಪಾರಿವಾಳ ಕುಳಿತಿರುವ ಚಿತ್ರವನ್ನು ಬಿಡಿಸಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ | Appu Namana | 500 ಕಿ.ಮೀ. ದೂರದ ಮನಗುಂಡಿಯಿಂದ ಕಾಲ್ನಡಿಗೆಯಲ್ಲಿ ಬಂದು ತಲುಪಿದ ಅಥ್ಲೀಟ್‌ ದಾಕ್ಷಾಯಿಣಿ

Exit mobile version