ಬೆಂಗಳೂರು: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೇನಾ ದಿನವನ್ನು ಆಚರಿಸಲಾಗುತ್ತಿದೆ(Army Day in Bengaluru). ಬೆಂಗಳೂರಿನ ಹಲಸೂರು ಎಂಇಜಿ ಸೆಂಟರ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
1949 ರ ಜನವರಿ 15 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭಾರತೀಯ ಸೈನ್ಯದ ಪ್ರಥಮ ಪ್ರಧಾನ ದಂಡಾನಾಯಕರಾದ ದಿನ. ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷ ಸೇನಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ದಿಲ್ಲಿಯಲ್ಲಿ ಆಚರಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ದಿಲ್ಲಿಯಿಂದ ಆಚೆಗೆ ಅಂದರೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಸೇನಾ ದಿನ ಹಿನ್ನೆಲೆಯಲ್ಲಿ ಪರೇಡ್ ನಲ್ಲಿ 8 ರೆಜಿಮೆಂಟ್ ಗಳ ಪಥಸಂಚಲನ ನಡೆಸಲಿವೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆರಿಂದ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಕೆ. ಅದಾದ ಬಳಿಕ ಸೈನ್ಯದ ಪಥ ಸಂಚಲದ ಗೌರವ ರಕ್ಷೆ ಸ್ವೀಕರಣೆ ನಡೆಯಲಿದೆ.
ಪಥ ಸಂಚಲನದದಲ್ಲಿ ಭಾರತೀಯ ಸೈನ್ಯದ ಶೌರ್ಯ ಪ್ರದರ್ಶನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ಬ್ಯಾಂಡ್‌ಗಳು, ಯುದ್ಧ ಸನ್ನದ್ಧತೆಗಳ ಕವಾಯತು ನಡೆಯಲಿದೆ. ರುದ್ರ & ಧ್ರುವ ಹೆಲಿಕಾಪ್ಟರ್, K9 ವಜ್ರ ಸ್ವಯಂಚಾಲಿತ ಗನ್, ಪಿನಾಕ ರಾಕೆಟ್, ತುಂಗುಸ್ಕಾ ಫೈಟರ್ ಜೆಟ್, 155mm ಹಾಗೂ 130 mm ಗನ್ ಪ್ರದರ್ಶನ ಕೂಡ ಇರಲಿದೆ
ಸೇನಾ ಮೆಡಲ್ ಪುರಸ್ಕೃತರು
ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಅವರು ಸೇನಾ ಮೆಡಲ್‌ಗಳನ್ನು ಪ್ರದಾನ ಮಾಡಲಿದ್ದಾರೆ. ಸೇನಾ ಮೆಡಲ್ ಪುರಸ್ಕೃತರ ಪಟ್ಟಿ ಇಲ್ಲಿದೆ.
| ಲೆಫ್ಟಿನೆಂಟ್ ಕರ್ನಲ್ ವಿಪಿನ್ ಕುಮಾರ್ ಕೌರ್
| ಮೇಜರ್ ಪ್ರಭ್ಜೋತ್ ಸಿಂಗ್ ಸೈನಿ
| ಮೇಜರ್ ಆದಿತ್ಯ ಭಿಷ್ಟ್ (ಪುಲ್ವಾಮಾ ಘಟನೆ)
| ಮೇಜರ್ ನಿಖಿಲ್ ಮನ್‌ಚಂದಾ (ಪುಲ್ವಾಮಾ ಘಟನೆ – 2018)
| ಹವಾಲ್ದಾರ್ ದೇಶ್‌ಮುಖ್ ನಿಲೇಶ್ ಮಲ್ಹಾರ್ ರಾವ್
| ನಾಯಕ್ ಸತೀಶ್ ಕುಮಾರ್
| ಸವಾರ್ ಕುರ್ಲಾ ಸುರೇಂದರ್
| ನಾಯಕ್ ಹರ್‌ಪ್ರೀತ್ ಸಿಂಗ್
| ಸಿಪಾಯಿ ಜಗ್‌ಪ್ರೀತ್ ಸಿಂಗ್
| ಮೇಜರ್ ಸಂಕಲ್ಪ್ ಯಾದವ್ (ಮರಣೋತ್ತರ) ಪರವಾಗಿ ತಂದೆ ಸುರೇಂದ್ರ ಕುಮಾರ್ ಯಾದವ್
| ಸುಬೇದಾರ್ ರಾಮ್ ಸಿಂಗ್ (ಮರಣೋತ್ತರ) ಪರವಾಗಿ ಪತ್ನಿ ಅನಿತಾ ಭಂಡಾರಿ
| ಹವಾಲ್ದಾರ್ ಮೊಹಮ್ಮದ್ ಸಲೀಂ ಅಖೂನ್ (ಮರಣೋತ್ತರ) ಪರವಾಗಿ ಪತ್ನಿ ಜುಬೇದಾ ಭಾನು
| ನಾಯಕ್ ಭನ್ವಾರಿ ಲಾಲ್ ರಾಥೋಡ್ (ಮರಣೋತ್ತರ) ಪರವಾಗಿ ಪತ್ನಿ ಸುನೀತಾ ರಾಥೋಡ್
| ಸಿಪಾಯಿ ಶಶಾಂಕ್ ಶೇಖರ್ ಸಾಮಲ್ (ಆಪರೇಶನ್ ಸ್ನೋ ಲೇಪರ್ಡ್) (ಮರಣೋತ್ತರ) ಪರವಾಗಿ ಪತ್ನಿ ಸುಶ್ಮಿತಾ ಸಾಮಲ್
ಇದನ್ನೂ ಓದಿ | Army Day | ಈ ಬಾರಿ ಸೇನಾ ದಿನಾಚರಣೆ ಬೆಂಗಳೂರಿನಲ್ಲಿ, ದೇಶದ ಇತಿಹಾಸದಲ್ಲೇ ಇದೇ ಮೊದಲು ಕರುನಾಡಿಗೆ ಆತಿಥ್ಯ