Site icon Vistara News

ಚಾಮರಾಜಪೇಟೆ ವೃದ್ಧ ಉದ್ಯಮಿಯ ಹಂತಕ ಗುಜರಾತ್‌ನಲ್ಲಿ ಪೊಲೀಸ್‌ ಬಲೆಗೆ

ಚಾಮರಾಜಪೇಟೆ: ಇಲ್ಲಿಯ ಹಿರಿಯ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹಂತಕನನ್ನು ಬೆಂಗಳೂರು ಪೊಲೀಸರು ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಆರೋಪಿ ಬಿಜುರಾಮ್‌ ಗುಜರಾತ್‌ನ ಪಾಲನ್ ಪುರ್‌ನಲ್ಲಿ ತಲೆಮರೆಸಿಕೊಂಡಿದ್ದ.

ಆರೋಪಿಯಿಂದ ಅಪಾರ ಪ್ರಮಾಣದ ಹಣ ಮತ್ತು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣ ಮತ್ತು ಚಿನ್ನ ದೋಚುವ ಉದ್ದೇಶದಿಂದಲೇ ಆರೋಪಿಯು ಉದ್ಯಮಿ ಜುಗುರಾಜ್‌ ರನ್ನು ಕೊಲೆ ಮಾಡಿರುವುದು ಖಚಿತಗೊಂಡಿದೆ.

ಮೊದಲು ವೃದ್ಧ ಜುಗುರಾಜ್‌ ಕಣ್ಣಿಗೆ ಆರೋಪಿ ಖಾರದ ಪುಡಿ ಎರಚಿದ್ದ. ಬಳಿಕ ಅವರ ಬಾಯಿಗೆ ಬಟ್ಟೆ ತುರುಕಿದ್ದ. ನಂತರ ಜುಗುರಾಜ್‌ ಕೈಯನ್ನು ಪ್ಲಾಸ್ಟಿಕ್ ದಾರದಿಂದ ಕಟ್ಟಿ ಮತ್ತೊಮ್ಮೆ ಬಾಯಿಗೆ ಬಲವಂತವಾಗಿ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಹಣ ಮತ್ತು ಚಿನ್ನಾಭರಣಗಳನ್ನು ಮೂಟೆ ಕಟ್ಟಿ ಪರಾರಿಯಾಗಿದ್ದ. ಭಾರ ಎನ್ನುವ ಕಾರಣಕ್ಕೆ 25 ಕೆ.ಜಿ. ಬೆಳ್ಳಿ ವಸ್ತುಗಳನ್ನು ಕೊನೇ ಕ್ಷಣದಲ್ಲಿ ಅಪಾರ್ಟ್‌ಮೆಂಟ್‌ನಲ್ಲೇ ಬಿಟ್ಟು ಹೋಗಿದ್ದ.

ಇದನ್ನೂ ಓದಿ: ಜುಗುರಾಜ್‌ ಕೊಲೆ‌ ಪ್ರಕರಣ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ..

ಇದನ್ನೂ ಓದಿ: ವೃದ್ಧನ ಕೈ ಕಟ್ಟಿ ಹತ್ಯೆ: ಎಂಟು ತಿಂಗಳಿಂದ ಜತೆಗಿದ್ದವನೇ ಮೂಟೆ ಮೂಟೆ ಹೊತ್ತೊಯ್ದ

Exit mobile version