Site icon Vistara News

Assault case : No Parking ಕಿರಿಕ್‌; ಟ್ರಾಫಿಕ್‌ ಪೊಲೀಸ್‌ ಮೇಲೆ ಅಟ್ಯಾಕ್‌

Assault on Traffic police

ಬೆಂಗಳೂರು: ನೋ ಪಾರ್ಕಿಂಗ್‌ನಲ್ಲಿ (No parking) ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ (Traffic Police) ಮೇಲೆ ದಾಳಿ ಮಾಡಿ ಹಲ್ಲೆ (Assault case) ನಡೆಸಿದ್ದಾರೆ. ಕಮ್ಮನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಬಾಣಸವಾಡಿ (Banaswadi traffic police) ಟ್ರಾಫಿಕ್‌ ಪೊಲೀಸ್‌ ಉಮೇಶ್‌ ಹಲ್ಲೆಗೊಳಗಾದವರು.

ಕಮ್ರಾನ್ ಶಹೀದ್ ಎಂಬಾತ ಟ್ರಾಫಿಕ್ ಪೊಲೀಸ್‌ ಉಮೇಶ್ ಮೇಲೆ ಎರಗಿ ದಾಳಿ ಮಾಡಿದ್ದಾನೆ. ಈ ಘಟನೆ ಜು. 19ರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್‌ 353, 332, 504, 506 ಎಫ್‌ಐಆರ್‌ ಹಾಕಲಾಗಿದೆ.

ಪೊಲೀಸರ ಮೇಲೆ ಹಲ್ಲೆ

ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕಿಂಗ್‌ ಮಾಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಲು ಪಿಸಿ ಉಮೇಶ್ ಮುಂದಾದರು. ಈ ವೇಳೆ ನಡು ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಾರೆ. ಇನ್ನು ಹಲ್ಲೆ ಮಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version