Site icon Vistara News

Assault Case: ಕನ್ನಡ ಮಾತಾಡಪ್ಪ ಎಂದಿದ್ದಕ್ಕೆ ಬಿಹಾರ್‌ ಯುವಕನಿಂದ ಕನ್ನಡಿಗನ ಮೇಲೆ ಹಲ್ಲೆ

#image_title

ಬೆಂಗಳೂರು: ಇಲ್ಲಿನ ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿರುವ ತಾಜಾ ಜ್ಯೂಸ್ ಶಾಪ್‌ನಲ್ಲಿ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಕ್ಕೆ ಅಂಗಡಿಯ ಯುವಕನೊಬ್ಬ ಗ್ರಾಹಕರಿಗೆ ಬಾಟಲಿನಿಂದ ಹಲ್ಲೆ (Assault Case) ನಡೆಸಿರುವ ಘಟನೆ ನಡೆದಿದೆ. ಬಿಹಾರ್ ಮೂಲದ ಯುವಕ ಶಬ್ಬೀರ್ ಎಂಬಾತ ದೀಪಕ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ ಜನವರಿ 31ರ ರಾತ್ರಿ 7:30ಕ್ಕೆ ದೀಪಕ್‌ ಐಸ್ ಕ್ರೀಂ ತಿನ್ನಲು ಅಂಗಡಿಗೆ ಹೋಗಿದ್ದಾರೆ. ಬಳಿಕ ಐಸ್ ಕ್ರೀಂ ಹಣ ಎಷ್ಟು ಎಂದು ದೀಪಕ್‌ ಕೇಳಿದ್ದಾರೆ. ಈ ವೇಳೆ ಶಬ್ಬೀರ್ ಹಿಂದಿ ಭಾಷೆಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದಾನೆ. ಆದರೆ ಹಿಂದಿ ಬಾರದ ಕಾರಣ ದೀಪಕ್‌ ಕನ್ನಡದಲ್ಲಿ ತಿಳಿಸುವಂತೆ ಹೇಳಿದ್ದಾರೆ.

ಈ ವೇಳೆ ಅವಾಚ್ಯ ಶಬ್ದಗಳಿಂದ ಶಬ್ಬೀರ್ ದೀಪಕ್‌ನನ್ನು ನಿಂದಿಸಿದ್ದು, ಈ ವಿಷಯಕ್ಕೆ ಸಣ್ಣ ಗಲಾಟೆ ಶುರುವಾಗಿದೆ. ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸಿದ್ದು, ದೀಪಕ್ ಮುಖಕ್ಕೆ ಪೆಪ್ಸಿ ಬಾಟಲಿನಿಂದ ಶಬ್ಬೀರ್‌ ಹಲ್ಲೆ ನಡೆಸಿದ್ದಾನೆ. ಇತ್ತ ಹಲ್ಲೆಯಿಂದ ತೀವ್ರ ಗಾಯಗೊಂಡ ದೀಪಕ್‌ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Supreme Court ನ್ಯಾಯಮೂರ್ತಿಗಳಾಗಿ ಐವರು ಜಡ್ಜ್‌ಗಳಿಂದ ಪ್ರಮಾಣ ವಚನ ಸ್ವೀಕಾರ

ಘಟನೆ ಬಗ್ಗೆ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೀಪಕ್ ಪೋಷಕರು ದೂರು ನೀಡಿದ್ದು, ಹಲ್ಲೆ ನಡೆಸಿದ್ದ ಆರೋಪಿ ಶಬ್ಬೀರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version