Site icon Vistara News

Assault Case: ಸೆಕ್ಯೂರಿಟಿ ಗಾರ್ಡ್‌ ಮೇಲೆ Blink it ಡೆಲಿವರಿ ಬಾಯ್‌ ದರ್ಪ; ಸಹಿ ಮಾಡಿ ಒಳಗೆ ಹೋಗಿ ಎಂದಿದ್ದಕ್ಕೆ ಹಲ್ಲೆ

Blink it delivery boys arrogance on security guard

Blink it delivery boys arrogance on security guard

ಬೆಂಗಳೂರು: ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ (Sampigehalli Police Station) ಚೊಕ್ಕನಹಳ್ಳಿ ಸಮೀಪದಲ್ಲಿರುವ ನಕ್ಷತ್ರ ಅಪಾರ್ಟ್‌ಮೆಂಟ್‌ನಲ್ಲಿರುವ (Nakshatra Apartment) ಸೆಕ್ಯೂರಿಟ್‌ ಗಾರ್ಡ್‌ ಮೇಲೆ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ (Blink It Delivery Boy) ಹಲ್ಲೆ ನಡೆಸಿದ್ದಾನೆ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿತ್ರ

ಕಳೆದ ಏಪ್ರಿಲ್ 26ರ ಮಧ್ಯಾಹ್ನದ ಹೊತ್ತು ಈ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಬಂದಿದ್ದ ಯುವಕರಿಬ್ಬರು ಏಕಾಏಕಿ ಅಪಾರ್ಟ್‌ಮೆಂಟ್‌ ಆವರಣದ ಒಳಗೆ ನುಗ್ಗಿದ್ದಾರೆ. ಅಲ್ಲೆ ಇದ್ದ ಸೆಕ್ಯೂರಿಟ್‌ ಗಾರ್ಡ್‌ ತಡೆದು, ಹೀಗೆಲ್ಲ ಅನುಮತಿಯಿಲ್ಲದೆ ಒಳಗೆ ಹೋಗುವಂತಿಲ್ಲ ಎಂದಿದ್ದಾರೆ. ಬಳಿಕ ಬುಕ್‌ನಲ್ಲಿ ಹೆಸರು ಬರೆದು ಸಹಿ ಮಾಡಿ ಒಳಗೆ ಹೋಗುವಂತೆ ಹೇಳಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಬ್ಲಿಂಕ್‌ಇಟ್‌ ಡೆಲಿವರಿ ಬಾಯ್‌ ಗಾಡಿಯಿಂದ ಇಳಿದವನೇ, ಸೆಕ್ಯೂರಿಟಿ ಗಾರ್ಡ್‌ ಜತೆಗೆ ಮಾತಿಗೆ ಮಾತು ಬೆಳೆಸಿದ್ದಾನೆ. ಮಾತಿನ ಚಕಮಕಿ ವೇಳೆ ಸೆಕ್ಯೂರಿಟ್‌ ಗಾರ್ಡ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಅಲ್ಲಿದ್ದ ಅಪಾರ್ಟೆಮೆಂಟ್‌ ನಿವಾಸಿಗಳು ಗಲಾಟೆಯನ್ನು ಬಿಡಿಸಿದ್ದಾರೆ.

ಇದನ್ನೂ ಓದಿ: Road Accident: ಚಿಕ್ಕಮಗಳೂರಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದ ಯುವತಿ ಮೃತ್ಯು

ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡೆಲಿವರಿ ಬಾಯ್‌ ದರ್ಪವನ್ನು ಖಂಡಿಸಿ, ಬೆಂಗಳೂರು ಪೊಲೀಸರಿಗೆ ವಿಡಿಯೊ ಸಮೇತ ಟ್ಯಾಗ್‌ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Exit mobile version