Site icon Vistara News

Assault Case : ಆಧಾರ್‌ ಕಾರ್ಡ್‌ ತೋರಿಸಮ್ಮ ಎಂದ ಲೇಡಿ ಕಂಡಕ್ಟರ್‌ ಮುಖವನ್ನೇ ಪರ ಪರನೆ ಪರಚಿದಳು

BMTC lady conductor assaulted by woman Passenger

ಬೆಂಗಳೂರು: ಯುವತಿಯೊಬ್ಬಳು ಬಿಎಂಟಿಸಿ ಬಸ್‌ನ ಮಹಿಳಾ ಕಂಡಕ್ಟರ್‌ಗೆ ಹಲ್ಲೆ ನಡೆಸಿದ್ದಾಳೆ (Assault Case) ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ (Free Bus) ನಡೆದಿದೆ. ಮೊನಿಷಾ ಎಂಬಾಕೆ ಬಿಎಂಟಿಸಿ ಕಂಡಕ್ಟರ್‌ ಸುಕನ್ಯಾ ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ.

ಮತ್ತಿಕೆರೆ ಬಜಾಜ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮೊನಿಷಾ ಬೆಳಗ್ಗೆ 9:45ಕ್ಕೆ ಬಿಎಂಟಿಸಿ ಬಸ್‌ ಏರಿದ್ದಾಳೆ. ಈ ವೇಳೆ ಕಂಡಕ್ಟರ್‌ ಸುಕನ್ಯಾ ಟಿಕೆಟ್‌ ಕೊಡುವ ಮುನ್ನ ಆಧಾರ್‌ ಕಾರ್ಡ್‌ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮೊನಿಷಾಳ ಉಗುರು ಸುಕನ್ಯಾರ ಮುಖಕ್ಕೆ ಪರಚಿದೆ. ನಂತರ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ.

ಇದನ್ನೂ ಓದಿ: Wife Missing in Bengaluru : 4 ತಿಂಗಳ ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ

ಇತರೆ ಪ್ರಯಾಣಿಕರು ಇವರಿಬ್ಬರ ಕಿತ್ತಾಟವನ್ನು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇಬ್ಬರು ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದಾರೆ. ಕಂಡಕ್ಟರ್‌ ಸುಕನ್ಯಾ ಅವರೇ ಮೊದಲು ಹೊಡೆದಿದ್ದು, ಆಕಸ್ಮಿಕವಾಗಿ ಬೆರಳು ಅವರ ಮುಖಕ್ಕೆ ಪರಚಿದೆ ಅಷ್ಟೇ ಎಂದಿದ್ದಾರೆ. ಇತ್ತ ಇವರಿಬ್ಬರ ಜಗಳ ತರಾಕಕ್ಕೇರುತ್ತಿದ್ದಂತೆ ರಸ್ತೆ ಮಧ್ಯೆ ಬಸ್‌ ನಿಲ್ಲಿಸಲಾಗಿದೆ. ನಂತರ ಸಹ ಪ್ರಯಾಣಿಕರು ಯುವತಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಬಸ್‌ನಲ್ಲಿದ್ದವರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿದ ಕಾರಣಕ್ಕೆ ಕಂಡಕ್ಟರ್‌ ಸುಕನ್ಯಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Assault Case : ʻಟಿಕೆಟ್‌ ಕೊಡಿ ಅಜ್ಜಿʼ ಎಂದವಳ ಕೆನ್ನೆಗೆ ಬಾರಿಸಿದ ಲೇಡಿ ಕಂಡಕ್ಟರ್‌

ಜಸ್ಟ್‌ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್‌!

ಧಾರವಾಡ: ತಾಳ್ಮೆ ಕಳೆದುಕೊಂಡ ಬಸ್‌ ಕಂಡಕ್ಟರ್‌ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿರುವ (Assault Case) ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿದೆ. ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್‌ ಕಪಾಳಮೋಕ್ಷ ಮಾಡಿದ್ದಾರೆ. ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್‌ ಬರುವಾಗ ಈ ಘಟನೆ ನಡೆದಿದೆ.

ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್‌ವೊಂದು ತೆರಳುತಿತ್ತು. ರಶ್‌ ಇದ್ದ ಬಸ್ಸಿನಲ್ಲಿ ಕಂಡಕ್ಟರ್‌ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್‌ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್‌ ಕಂಡಕ್ಟರ್‌ಗೆ ಟಚ್‌ ಆಗಿದೆ. ಆಗ ಕಂಡಕ್ಟರ್‌ ಕೈಯಲ್ಲಿದ್ದ ಟಿಕೆಟ್‌ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್‌ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದಾರೆ. ಕಂಡಕ್ಟರ್‌ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಬಸ್‌ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಪಾಲಕರ ಪ್ರತಿಭಟನೆ

ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ದಿಢೀರ್‌ ಪ್ರತಿಭಟನೆ ನಡೆಸಿದರು. ಕಂಡಕ್ಟರ್ ವರ್ತನೆಗೆ ಕಿಡಿಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್‌ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿದೆ.

ಇದು ಫ್ರೀ ಬಸ್‌ ಎಫೆಕ್ಟಾ?

ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ (Government bus) ಮಹಿಳೆಯರ ಉಚಿತ ಪ್ರಯಾಣಕ್ಕೆ (Free bus service) ಅವಕಾಶವಿರುವ ಶಕ್ತಿ ಯೋಜನೆ (Shakti scheme) ಜಾರಿಗೆ ಬಂದ ಬಳಿಕ ಬಸ್‌ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂಬಂಧವೇ ಹದಗೆಟ್ಟು ಹೋಗಿದೆ. ಜನದಟ್ಟಣೆ, ಒತ್ತಡಗಳಿಂದ ಕಂಗೆಟ್ಟು ಹೋಗಿರುವ ಬಸ್‌ ಸಿಬ್ಬಂದಿ (KSRTC bus staff) ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೇವಲ ಅವರಷ್ಟೇ ಅಲ್ಲ, ಬಸ್‌ನಲ್ಲಿ ಸೀಟ್‌ಗಾಗಿ ಪ್ರಯಾಣಿಕರು ಪರಸ್ಪರ ಕಿತ್ತಾಡಿಕೊಂಡು, ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದು ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version