ಬೆಂಗಳೂರು ಗ್ರಾಮಾಂತರ: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೊನಪ್ಪನ ಅಗ್ರಹಾರ ಹೋಟೆಲ್ ಬಳಿ ಕ್ಯಾಬ್ ಚಾಲಕನೊಬ್ಬ ಫೋನ್ ಕಾಲ್ ರಿಸೀವ್ ಮಾಡಿಲ್ಲವೆಂದು ಕಾರು ಮಾಲೀಕರು ಹಿಡಿದು (Assault Case) ಥಳಿಸಿದ್ದಾರೆ. ಬೀದರ್ ಮೂಲದ ಕ್ಯಾಬ್ ಚಾಲಕ ಕ್ರಿಸ್ ವಿಲಿಯಂ ಹಲ್ಲೆಗೊಳಾದವರು. ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಹಲ್ಲೆ ನಡೆಸಿದ್ದಾರೆ.
ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಸಮೀಪ ಇರುವ Vio fleet ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯವರು ಸುಮಾರು 20ಕ್ಕೂ ಅಧಿಕ ಕಾರುಗಳನ್ನು ಹೊಂದಿದ್ದಾರೆ. ಈ ಸಂಸ್ಥೆಯು ಉಬರ್ ಮೂಲಕ ಕಾರುಗಳನ್ನು ಬಾಡಿಗೆ ಕೊಡುತ್ತದೆ.
ಇತ್ತೀಚೆಗೆ ಚಾಲಕ ವಿಲಿಯಂ Workindia.in ಮೂಲಕ ಕೆಲಸಕ್ಕೆ ಹುಡುಕಾಟ ನಡೆಸಿದಾಗ Vio fleet ಸಂಸ್ಥೆಯ ಮಾಲೀಕ ರಾಜೀವ್ ರಂಜನ್ ಕೆಲಸಕ್ಕೆ ಆಫರ್ ನೀಡಿದ್ದರು. ಕೆಲಸಕ್ಕೆ ಸೇರಿದ್ದ ವಿಲಿಯಂ ಮೂರು ದಿನಗಳ ಕಾಲ ನೈಟ್ ಶಿಫ್ಟ್ ಮಾಡಿದ್ದ. ಆದರೆ, ಮೂರೇ ದಿನಕ್ಕೆ ಮಾಲೀಕನ ಕಿರುಕುಳಕ್ಕೆ ಬೇಸತ್ತು ಕೆಲಸ ಬಿಡಲು ನಿರ್ಧಾರ ಮಾಡಿದ್ದ ಎಂದು ತಿಳಿದು ಬಂದಿದೆ.
ಕೊನಪ್ಪನ ಅಗ್ರಹಾರ ಫಾರ್ಚುನ್ ಸೂಟ್ಸ್ ಹೋಟೆಲ್‌ನಲ್ಲಿ ಚಾಲಕ ವಿಲಿಯಮ್ ರೂಮ್ ಮಾಡಿಕೊಂಡಿದ್ದರು. ಹೀಗಿದ್ದಾಗ ಕಳೆದ 17ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಟೆಲ್ ಬಳಿ ಕಾರು ನಿಲ್ಲಿಸಿಕೊಂಡಿದ್ದಾಗ, ಅಲ್ಲಿಗೆ ಬಂದಿದ್ದ ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಏಕಾಏಕಿ ವಿಲಿಯಮ್ ಮೇಲೆ ಹಲ್ಲೆ ಮಾಡಿದ್ದಾರೆ. ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಕ್ಕೆ ಥಳಿಸಿದ್ದಾರೆ.
ಇದನ್ನೂ ಓದಿ: Bellary Central Jail: ಬಳ್ಳಾರಿ ಕೇಂದ್ರ ಕಾರಾಗೃಹದ ಮೇಲೆ ಎಸ್‌ಪಿ ತಂಡ ದಾಳಿ: ಒಂದು ಮೊಬೈಲ್, ಮೂರು ಸಿಮ್ ವಶ
ಹಲ್ಲೆಗೊಳಗಾದ ಕ್ರಿಸ್ ವಿಲಿಯಂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ