ಕಲಬುರಗಿ: ಟ್ರೇಡ್ ಲೈಸೆನ್ಸ್ (Trade License) ವಿಚಾರಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ (Health Inspector) ಮೇಲೆ ಹಲ್ಲೆ (Assault Case) ನಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಬೆಂಬಲಿಗರು ಕಲಬುರಗಿಯ ಪಾಲಿಕೆ ಕಚೇರಿಗೆ ನುಗ್ಗಿ ಹೆಲ್ತ್ ಇನ್ಸ್ಪೆಕ್ಟರ್ ಧನಶೆಟ್ಟಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಪಾಲಿಕೆಯ ಉಪ ಆಯುಕ್ತರ ಸಮ್ಮುಖದಲ್ಲೇ ಹೆಲ್ತ್ ಇನ್ಸ್ಪೆಕ್ಟರ್ ಧನಶೆಟ್ಟಿ ಮೇಲೆ ಅವಿನಾಶ್ ಭಾಸ್ಕರ್ ಎಂಬಾತ ಮನಬಂದಂತೆ ಥಳಿಸಿದ್ದಾನೆ. ಮೂರ್ನಾಲ್ಕು ಬಾರಿ ಹೊಡೆದಿದ್ದಾನೆ. ಅವಿನಾಶ್ ಭಾಸ್ಕರ್ ಟ್ರೇಡ್ ಲೈಸೆನ್ಸ್ ವಿಚಾರಕ್ಕೆ ಗಲಾಟೆ ತೆಗೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಕಂಠ ಪೂರ್ತಿ ಕುಡಿದು ಬೆಂಬಲಿಗರೊಂದಿಗೆ ಬಂದ ಅವಿನಾಶ್ ಮಾತಿಗೆ ಮಾತು ಬೆಳೆಸಿದ್ದಾನೆ. ಈ ವೇಳೆ ಏಕಾಏಕಿ ಹೆಲ್ತ್ ಇನ್ಸ್ಪೆಕ್ಟರ್ ಧನಶೆಟ್ಟಿಯವರನ್ನು ಹಿಡಿದು ಎಳೆದಾಡಿದ್ದಾರೆ. ಬಳಿಕ ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ. ಪಾಲಿಕೆ ಕಚೇರಿಯಲ್ಲಿ ಕರ್ತವ್ಯ ನಿರತ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯ
ಅವಿನಾಶ್ ಭಾಸ್ಕರ್ ಈ ಹಿಂದೆ ಕೂಡ ಎರಡ್ಮೂರು ಬಾರಿ ಗಲಾಟೆ ಮಾಡಿಹೋಗಿದ್ದ ಎನ್ನಲಾಗಿದೆ. ಸದ್ಯ ಹಲ್ಲೆ ಪ್ರಕರಣ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ