Site icon Vistara News

Assault Case : ಬೇಲ್‌ಗಾಗಿ ಲಾಯರ್‌ರೇ ಕಿಡ್ನ್ಯಾಪ್‌; ಅರೆಬೆತ್ತಲೆಗೊಳಿಸಿ ರೌಡಿಸಂ

rowdy sheeter

ಬೆಂಗಳೂರು: ಜೈಲಲ್ಲಿ ಇರುವ ನಮ್ಮವರಿಗೆ ಜಾಮೀನು ಕೊಡಿಸಬೇಕೆಂದು ಕೆಲ ರೌಡಿಗಳು ವಕೀಲರನ್ನೇ ಕಿಡ್ನ್ಯಾಪ್ (Kidnapping Case) ಮಾಡಿರುವ ಘಟನೆ ನಡೆದಿದೆ. ನಾಲ್ವರು ರೌಡಿಶೀಟರ್‌ಗಳು (Rowdy Sheeter) ಸೇರಿ ವಕೀಲ ಗಿರಿಧರ್‌ ಎಂಬುವವರನ್ನು (Lawyer‌ kidnapping) ಅಪಹರಿಸಿ, ಮನಬಂದಂತೆ ಹಲ್ಲೆ (Assault Case) ನಡೆಸಿದ್ದಾರೆ.

ರೌಡಿಶೀಟರ್ ರಾಜೇಶ್ ಅಲಿಯಾಸ್‌ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್‌ ಆಪಲ್, ಜಾನ್, ಭರತ್ ಎಂಬುವವರು ಹಲ್ಲೆಕೋರರಾಗಿದ್ದಾರೆ. ಗಿರಿಧರ್‌ ಅವರನ್ನು ಕಿಡ್ನ್ಯಾಪ್‌ ಮಾಡಿ 8 ಜನರಿಗೆ ಜಾಮೀನು ಕೊಡಿಸಬೇಕು ಜತೆಗೆ 5 ಲಕ್ಷ ರೂ. ತಂದುಕೊಡಬೇಕೆಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ ಓವರ್‌ಟೇಕ್‌ ವೇಳೆ ಟೆಂಪೊ ಪಲ್ಟಿ; ಕ್ರೀಡಾಕೂಟಕ್ಕೆ ಹೋಗುತ್ತಿದ್ದ 25 ವಿದ್ಯಾರ್ಥಿಗಳಿಗೆ ಗಾಯ

ಕಿಡ್ನ್ಯಾಪ್ ಮಾಡಿ ಕಾರಿನ ಜಾಕ್ ರಾಡ್ , ಸ್ಪಾನರ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಜತೆಗೆ ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ರಾತ್ರಿ ಇಡೀ ಕೂರಿಸಿ ಹಲ್ಲೆ ಮಾಡಿದ್ದಾರೆ. ಹರ್ಷಿತ್ ಅಲಿಯಾಸ್‌ ಆಪಲ್ ಆ್ಯಂಡ್ ಗ್ಯಾಂಗ್‌ ಕಾರಿನಲ್ಲಿ ಕಿಡ್ಯ್ನಪ್‌ ಮಾಡಿ, ಜೈಲಿನಲ್ಲಿರುವ ನಮ್ಮವರಿಗೆ ಜಾಮೀನು ಕೊಡಿಸಬೇಕು ಜತೆಗೆ ನಮಗೆ ಐದು ಲಕ್ಷ ಹಣ ಕೊಡಬೇಕು ಎಂದು ಥಳಿಸಿದ್ದಾರೆ.

ಬೆಳಗಿನ ಜಾವದವರೆಗೂ ಹಲ್ಲೆ ನಡೆಸಿದ ರೌಡಿಗಳು, ಗಿರಿಧರ್‌ ಜೇಬಿನಲ್ಲಿದ್ದ 10 ಸಾವಿರ ರೂ. ಕಿತ್ತುಕೊಂಡಿದ್ದಾರೆ. ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ಅಥವಾ ಹಣ ಕೊಡದಿದ್ದರೆ ಹುಡುಗರನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಸದ್ಯ ವಕೀಲರ ದೂರಿನನ್ವಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಳಿ ರಾಜೇಶ್, ಹರ್ಷಿತ್@ ಆಪಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಮಾಡಿ

Exit mobile version