Site icon Vistara News

Assault Case : ನಮ್ಮಣ್ಣನೇ ಬಾಸ್‌ ಎಂದು ಯುವಕನಿಗೆ ಲಾಂಗ್‌ ಬೀಸಿದ ರೀಲ್ಸ್‌ ಬಾಯ್ಸ್‌ ಅರೆಸ್ಟ್‌

rowdies assault in bengaluru.

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಪುಂಡರ ದಾಂಧಲೆ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ಏರಿಯಾದಲ್ಲಿ ಪುಡಿರೌಡಿಗಳ ಕಿರಿಕ್‌ (Assault Case) ಇದ್ದೆ ಇರುತ್ತೆ. ಅದರಲ್ಲೂ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಏರಿಯಾದಲ್ಲಿ ಹವಾ ಇರಬೇಕೆಂದು ಪುಡಿರೌಡಿಯೊಬ್ಬ ಯುವಕನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.

ಬ್ಯಾಡರಹಳ್ಳಿ ಠಾಣಾ ರೌಡಿಶೀಟರ್ ಅಂದ್ರಹಳ್ಳಿ ಜಗ್ಗಿ ಸಹೋದರ ಅಭಿ ಅಲಿಯಾಸ್‌ ಅಭಿಷೇಕ್‌ ಎಂಬಾತ ಯುವಕನಿಗೆ ಹಲ್ಲೆ ನಡೆಸಿ ಅದನ್ನು ವಿಡಿಯೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ. ನಮ್ಮ ಅಣ್ಣ ಈ ಏರಿಯಾಗೆ ಬಾಸ್‌, ಅವರನ್ನು ಬಾಸ್‌ ಎಂದು ಹೇಳಬೇಕು. ಇಲ್ಲವಾದರೆ ಕೊಂದೇ ಬಿಡ್ತಿನಿ ಎಂದು ಲಾಂಗ್‌ನಿಂದ ಉಲ್ಟಾ ಮಾಡಿ ಯುವಕನೊಬ್ಬನಿಗೆ ಹಲ್ಲೆ ಮಾಡಿದ್ದ.

ಇದನ್ನೂ ಓದಿ: Elephant attack : ನಾಗಮಲೆಯಲ್ಲಿ ಕಾಡಾನೆ ದಾಳಿಗೆ ಒಬ್ಬ ಬಲಿ, ಮತ್ತೊಬ್ಬ ಬಚಾವ್‌

ಹಲ್ಲೆ ಮಾಡಿ ಬಳಿಕ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ ವಾರ್ನಿಂಗ್‌ ಮಾಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬ್ಯಾಡರಹಳ್ಳಿ ಪೊಲೀಸರು ವಿಡಿಯೊ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಅಭಿಷೇಕ್‌, ದರ್ಶನ್‌ ಸೇರಿ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

ರೌಡಿಶೀಟರ್‌ ಸಹೋದರನಾದ ಅಭಿಷೇಕ್‌ ಇತ್ತೀಚೆಗೆ ಅಂದ್ರಹಳ್ಳಿ ಭಾಗದಲ್ಲಿ ತನ್ನದೆ ಹವಾ ಸೃಷ್ಟಿಸಲು ಮುಂದಾಗಿದ್ದ. ಯುವಕರ ಗ್ಯಾಂಗ್‌ ಕಟ್ಟಿಕೊಂಡು ಪುಂಡಾಟಿಕೆ ಶುರು ಮಾಡಿದ್ದ. ಯುವಕನೊಬ್ಬನನ್ನು ರೂಮಿನಲ್ಲಿ ಲಾಕ್‌ ಮಾಡಿ ಅಭಿ ಮನಬಂದಂತೆ ಥಳಿಸಿದ್ದ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version