Site icon Vistara News

Assault Case : ಶತ್ರುಗೆ ರೂಂ ಕೊಡ್ತೀಯಾ ಎಂದು ಲಾಂಗ್‌ ಬೀಸಿದ; ಗರ್ಲ್‌ಫ್ರೆಂಡ್‌ ಜತೆಗಿದ್ದಾಗಲೇ ಅರೆಸ್ಟ್‌!

rowdy sheeter Naveen @ star Naveen Arrested

ಬೆಂಗಳೂರು: ನನ್ನ ಶತ್ರುಗೆ ನೀನು ರೂಂ ಕೊಡ್ತೀಯಾ ಎಂದು ಸಿಟ್ಟಿಗೆದ್ದ ರೌಡಿಶೀಟರ್‌ವೊಬ್ಬ (Rowdy Sheeter Arrested) ಎಗ್ ರೈಸ್ ಮಾರುವವನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದ. ನಗರದ ಕುಖ್ಯಾತ ರೌಡಿ ಕುಳ್ಳು ರಿಝ್ವಾನ್ ಮಾಜಿ ಶಿಷ್ಯನಾಗಿರುವ ಸಿದ್ದಾಪುರ ರೌಡಿ ಶೀಟರ್ ನವೀನ್ ಅಲಿಯಾಸ್‌ ಸ್ಟಾರ್ ನವೀನ್ ಬಂಧಿತ ಆರೋಪಿ ಆಗಿದ್ದಾನೆ.

ವರುಣ್ ಅಲಿಯಾಸ್‌ ಮೂಕ್ರಿ ಎಂಬಾತನ ಮೇಲೆ ರಿವೆಂಜ್ ತೀರಿಸಿಕೊಳ್ಳಲು ಗ್ಯಾಂಗ್ ಜತೆಗೆ ನವೀನ್‌ ಬಂದಿದ್ದ. ಎಗ್ ರೈಸ್ ಮಾರುವ ವ್ಯಕ್ತಿಯ ಮನೆಗೆ ನುಗ್ಗಿ ಲಾಂಗ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದ.

ಇದನ್ನೂ ಓದಿ: Bengaluru Accidents : ಜಸ್ಟ್‌ 24 ಗಂಟೆಯಲ್ಲಿ ರಾಜಧಾನಿಯಲ್ಲಿ 14 ಭೀಕರ ಅಪಘಾತ, 4 ಸಾವು!

ಗರ್ಲ್‌ ಫ್ರೆಂಡ್‌ ಜತೆಗೆ ಜಾಲಿಯಾಗಿರುವಾಗಲೇ ಲಾಕ್‌

ಇನ್ನು ಕೃತ್ಯ ಎಸಗಿ ಪರಾರಿ ಆಗಿದ್ದ ನವೀನ್‌ ತನ್ನ ಪ್ರಿಯತಮೆಯ ಜತೆ ಇದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬದಲಾಗು ಎಂದು ಕೈಗೆ 10 ಸಾವಿರ ಕೊಟ್ಟಿದ್ದ ಸಬ್ ಇನ್ಸ್‌ಪೆಕ್ಟರ್‌

ಬಹುತೇಕರಿಗೆ ಪೊಲೀಸರು ಎಂದರೆ ಆರೋಪಿಗಳನ್ನು ಶಿಕ್ಷಿಸುವವರು ಎಂಬ ಮನೋಭಾವನೆ ಇದೆ. ಆದರೆ ಕೆಲವೊಮ್ಮೆ ಅಪರಾಧಿಗಳ ತಪ್ಪು ತಿದ್ದಿ ಸಹಾಯ ಮಾಡುವವರು ಇದ್ದಾರೆ. ಹೀಗೆ ಸಿದ್ದಾಪುರ ಸಬ್ ಇನ್ಸ್‌ಪೆಕ್ಟರ್ ರೌಡಿಶೀಟರ್‌ ನವೀನ್‌ಗೆ ನಿಂದು ಇನ್ನು ಚಿಕ್ಕ ವಯಸ್ಸು ಬದಲಾಗು ಎಂದು ಕರುಣೆ ತೋರಿಸಿದ್ದರು.

ಕುಳ್ಳು ರಿಝ್ವಾನ್ ಬಳಿ ಇದ್ದ ಸಮಯದಲ್ಲಿ ಸಿದ್ದಾಪುರ ಸಬ್ ಇನ್ಸ್‌ಪೆಕ್ಟರ್ ಇನ್ನು ಚಿಕ್ಕವನು ಯಾಕೆ ಹಾಳಾಗುತ್ತೀಯಾ, ಒಳ್ಳೆ ರೀತಿ ಬಾಳು ಎಂದಿದ್ದರು. ಖರ್ಚಿಗೆ 10 ಸಾವಿರ ನೀಡಿ, ಕೆಲಸ ಕೊಡಿಸಿದ್ದರು. ಆದರೆ ನವೀನ್‌ ತನ್ನ ಚಾಳಿಯನ್ನು ಬಿಡದೆ ಮುಂದುವರಿಸಿದ್ದ. ಬದುಕೋ ಹೋಗು ಎಂದು ಬಿಟ್ಟು ಕಳಿಸಿದ ಪೊಲೀಸರ ಕೈಗೆ ಮತ್ತೆ ಲಾಕ್‌ ಆಗಿದ್ದಾನೆ.

ಪ್ರವಾಸದ ನೆಪದಲ್ಲಿ ಬಾಲಕಿಗೆ ಮತ್ತು ಬರಿಸಿ ಕಾಮುಕರ ದುಷ್ಕೃತ್ಯ

ಶಿವಮೊಗ್ಗ: ಮನುಷ್ಯನ ಕಾಮ ಲಾಲಸೆ (Lust of humans) ಯಾವ ಪ್ರಮಾಣದಲ್ಲಿ ಮಿತಿ ಮೀರುತ್ತಿದೆ ಎನ್ನುವುದನ್ನು ಅಳೆಯುವುದೇ ಕಷ್ಟ. ದುರಂತವೆಂದರೆ ಈ ಹುಚ್ಚು ಕಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ಸೋಮವಾರ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 21 ವರ್ಷದ ದುಷ್ಟನೊಬ್ಬ ಎಂಟು ಮತ್ತು ಆರು ವರ್ಷದ ಅಕ್ಕ ಮತ್ತು ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ (Physical abuse) ನಡೆಸಿದ್ದ ಘಟನೆ ವರದಿಯಾಗಿತ್ತು. ಇದೀಗ ಶಿವಮೊಗ್ಗದ ಸಾಗರದಲ್ಲಿ ಇಬ್ಬರು ಯುವಕರು ಸೇರಿ ಒಬ್ಬ ಅಮಾಯಕ ಬಾಲಕಿಯ (Abusing a girl) ಮೇಲೆ ಏರಿ ಹೋಗಿದ್ದಾರೆ.

ಸಾಗರದ ಅಜಯ್ (32) ಮತ್ತು ಶಾಬಾಜ್‌ (26) ಎಂಬ ಇಬ್ಬರು ದುಷ್ಟರೇ ಈ ರೀತಿಯಾಗಿ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದವರು. ಅವರ ಮೇಲೆ ಪೋಕ್ಸೊ (Pocso Case), ಅಟ್ರಾಸಿಟಿ ಕಾಯ್ದೆಯಡಿ (Atrocity case) ಕೇಸ್ ದಾಖಲಾಗಿದೆ. ಪರಿಶಿಷ್ಟ ಕುಟುಂಬಕ್ಕೆ ಸೇರಿದ ಬಾಲಕಿಗೆ ಪರಿಚಿತರೇ ಆಗಿರುವ ದುಷ್ಟರು ಆಕೆಯನ್ನು ಪ್ರವಾಸದ ನೆಪದಲ್ಲಿ ಕರೆದೊಯ್ದು ದುಷ್ಕೃತ್ಯ ಮೆರೆದಿದ್ದಾರೆ.

ಶಾಲೆಗೆ ಹೋಗುವ ಈ ಹುಡುಗಿಯನ್ನು ಅಣ್ಣ ಅಣ್ಣ ಎಂಬ ನೆಲೆಯಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದರು ಈ ಯುವಕರು. ಆದರೆ ಅವರ ಮನಸ್ಸಿನಲ್ಲಿ ಇದ್ದ ಭಾವನೆಯೇ ಬೇರೆ. ಆಕೆಯ ಜತೆ ಸಂಪರ್ಕದಲ್ಲಿದ್ದ ಇವರು ಆಗಸ್ಟ್‌ 19ರಂದು ಪ್ರವಾಸದ ನೆಪದಲ್ಲಿ ಕರೆದಿದ್ದಾರೆ. ನಾವಿದ್ದೇವೆ ಹೋಗಿ ಬರೋಣ ಎಂದು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ. ಪರಿಚಿತರೆಂಬ ನೆಲೆಯಲ್ಲಿ ಆಕೆಯೂ ಅವರ ಜತೆ ಬಂದಿದ್ದಾಳೆ.

ಶನಿವಾರ ಶಿವಮೊಗ್ಗದಲ್ಲಿ ಅಲ್ಲಿಲ್ಲಿ ಸುತ್ತಾಡಿಸಿದ ಇವರು ಬಳಿಕ ಆಕೆಯನ್ನು ಸುರಕ್ಷಿತ ಜಾಗವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಮತ್ತು ಬರುವ ಔಷಧ ನೀಡಿದ್ದಾರೆ. ಆಕೆ ಮತ್ತಿಗೆ ಜಾರುತ್ತಿದ್ದಂತೆಯೇ ಇವರು ಮೊದಲೇ ನಿರ್ಧಾರ ಮಾಡಿದಂತೆ ಸರದಿಯಂತೆ ಆಕೆಯ ಮೇಲೆ ಎರಗಿದ್ದಾಳೆ. ಅರೆ ಮಂಪರಿನಲ್ಲಿದ್ದ ಆಕೆ ನೋವನ್ನು ಹೇಗೋ ಸಹಿಸಿಕೊಂಡಿದ್ದಾಳೆ.

ಸ್ವಲ್ಪ ಹೊತ್ತಿನ ಬಳಿಕ ಅರೆ ಎಚ್ಚರವಾದ ಬಳಿಕ ಆಕೆ ಎದ್ದು ನೋಡಿದರೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದಿದೆ. ಆಕೆ ಕಣ್ಣೀರು ಹಾಕಿ ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದ್ದಾಳೆ ಎನ್ನಲಾಗಿದೆ. ಈ ನಡುವೆ ಹುಡುಗರೇ ಆಕೆಯನ್ನು ಸಾಗರಕ್ಕೆ ಮರಳಿ ತಂದು ಬಿಟ್ಟಿದ್ದಾರೆ. ಆದರೆ, ಯಾವ ಕಾರಣಕ್ಕು ವಿಷಯವನ್ನು ಮನೆಯಲ್ಲಿ ತಿಳಿಸಬಾರದು, ತಿಳಿಸಿದರೆ ನಿನಗೇ ತೊಂದರೆ ಎಂದು ಹೆದರಿಸಿದ್ದಾರೆ.

ಕಲಬುರಗಿಯಲ್ಲಿ ನಡೆದ ಘಟನೆಯ ಪೂರ್ಣ ವಿವರ: Physical abuse : ಅಬ್ಬಾ ಇವನೆಂಥಾ ಕಾಮುಕ? ; ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ

ನೋವಿನಿಂದಲೇ ಮನೆಗೆ ಬಂದ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದರೆ ತನ್ನದೇ ತಪ್ಪಾಗುತ್ತದೆ, ಅವರ ಜತೆಗೆ ಹೋಗಿದ್ದು ಯಾಕೆ ಎಂದು ಕೇಳುತ್ತಾರೆ ಎಂದು ಭಯಗೊಂಡಿದ್ದಳು. ಆದರೆ ಮನೆಯಲ್ಲಿ ಆಕೆಯ ಚಲನವಲನ, ಆಕೆ ಅನುಭವಿಸುತ್ತಿರುವ ನೋವು ಕಂಡು ವಿಚಾರಿಸಿದಾಗ ಸತ್ಯ ಹೊರಗೆ ಬಂದಿದೆ.

ಸೋಮವಾರ (ಆಗಸ್ಟ್‌ 21) ಸಂಜೆ ಸಾಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನು ತಿಳಿಯುತ್ತಿದ್ದಂತೆಯೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚುವುದಕ್ಕಾಗಿ ಸಾಗರ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version