ಕೋಲಾರ: ಇಲ್ಲಿನ ಮುಳುಬಾಗಿಲಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಹಾಗೂ ಸದಸ್ಯರೊಬ್ಬರ ನಡುವೆ ಮಾತಿನ ಚಕಮಕಿ (Assault Case) ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡಿಬಡಿ ಹಂತಕ್ಕೂ ತಲುಪಿದೆ. ಆವರಣದಲ್ಲೇ ಅಧ್ಯಕ್ಷೆ-ಸದಸ್ಯನ ಮಾರಾಮಾರಿಯನ್ನು ಸ್ಥಳೀಯರು ವಿಡಿಯೊ ಮಾಡಿದ್ದಾರೆ.
ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಶಿಷ್ಯ ಜಮ್ಮನಳ್ಳಿ ಕೃಷ್ಣ ಎಂಬಾತ ಗ್ರಾ. ಪಂ ಅಧ್ಯಕ್ಷೆ ಪೂರ್ಣಿಮ ಎಂಬುವವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಶುಕ್ರವಾರ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಕರ ವಸೂಲಾತಿ ಬಗ್ಗೆ ಚರ್ಚೆ ನಡೆಯುತಿತ್ತು. ಈ ವೇಳೆ ಪಂಚಾಯಿತಿ ಸದಸ್ಯನಾಗಿರುವ ಜಮ್ಮನಳ್ಳಿ ಕೃಷ್ಣ ಗಲಾಟೆ ಮಾಡಿದ್ದಾರೆ.
ಸಾಮಾನ್ಯ ಸಭೆ ನಡೆಯುವಾಗಲೇ ಗ್ರಾಮ ಪಂಚಾಯಿತ ಅಧ್ಯಕ್ಷೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹೀಗೆ ರಾಜಾರೋಷವಾಗಿ ಮಹಿಳೆಯೊಬ್ಬರ ಮೇಲೆ ಎರಗಿದ್ದಕ್ಕೆ ಇತರೆ ಸದಸ್ಯರು ಕಿಡಿಕಾರಿದ್ದಾರೆ. ಇವರಿಬ್ಬರ ಮಧ್ಯೆ ಗ್ರಾಮಸ್ಥರು ಮಧ್ಯ ಪ್ರವೇಶ ಮಾಡಿ ಗಲಾಟೆಯನ್ನು ನಿಲ್ಲಿಸಿದ್ದಾರೆ. ಪಂಚಾಯಿತಿ ಜಗಳವು ಸದ್ಯ ಠಾಣೆ ಮೆಟ್ಟಿಲೇರಿದ್ದು, ಇಬ್ಬರಿಂದಲು ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Drunk and drive : ಕುಡಿದು ಸ್ಕೂಲ್ ಬಸ್ ಚಲಾಯಿಸಿದ ಡೈವರ್; ಹಾರಿಹೋಯ್ತು ವ್ಯಕ್ತಿಯ ಪ್ರಾಣಪಕ್ಷಿ
ನಡುರಸ್ತೆಯಲ್ಲೇ ಚಿಮ್ಮಿತು ಗ್ರಾ.ಪಂ ಅಧ್ಯಕ್ಷನ ರಕ್ತ; ಹಳೆ ವೈಷಮ್ಯಕ್ಕೆ ಭೀಕರ ಹತ್ಯೆ
ಕಲಬುರಗಿ: ಜನರು ಓಡಾಡುವ ಹೊತ್ತಿನಲ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾರೆ. ಮದರಾ(ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಕೊಲೆಯಾದವರು.
ಅಫಜಲಪುರ ತಾಲೂಕಿನ ಚೌಡಾಪುರ ಬಸ್ ನಿಲ್ದಾಣದ ಬಳಿ ಗೌಡಪ್ಪಗೌಡ ಪಾಟೀಲ್ ನಿಂತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಇವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಆದರೂ ಬಿಡದೇ ಬೆನ್ನಹತ್ತಿ ಕೊಚ್ಚಿ ಕೊಲೆಗೈದಿದ್ದಾರೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಹತ್ಯೆ ಮಾಡಿದ ಹಂತಕರ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ನಡುರಸ್ತೆಯಲ್ಲೇ ಮಚ್ಚು-ಲಾಂಗು ಝಳಪಿಸಿರುವುದನ್ನು ಕಂಡು
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ