Site icon Vistara News

Assault case: ವಿದ್ಯಾರ್ಥಿ ಮೇಲೆ ಲಾಂಗ್‌ ಬೀಸಿದ ಹೆಲ್ಮೆಟ್‌ಧಾರಿ ಯುವಕರ ಗುಂಪು

Student attacked by gang

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಒಂದಾದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕಳೆದ ಜೂನ್ 5ರಂದು ಬೆಳಗ್ಗೆ 10:35ರ ಸುಮಾರಿಗೆ ಹೆಲ್ಮೆಟ್‌ಧಾರಿ ಯುವಕರ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದರು. ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಮೇಲೆ ದಾಳಿ (Assault case) ನಡೆಸಿ ಪರಾರಿ ಆಗಿದ್ದಾರೆ.

ಕೆಎಲ್‌ಇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದರ್ಶನ್ ಎಂಬಾತ ಕ್ಲಾಸ್ ಮುಗಿಸಿಕೊಂಡು ಪಕ್ಕದಲ್ಲೇ ಇರುವ ಮೆಡಿಕಲ್ ಶಾಪ್‌ಗೆ ಗೆಳೆಯರ ಜತೆ ಹೋಗಿದ್ದರು. ಮೆಡಿಕಲ್ ಶಾಪ್‌ಗೆ ಹೋಗಿ ಬಂದಿದ್ದ ದರ್ಶನ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಯುವಕರ ತಂಡ ಏಕಾಏಕಿ ಹೊಡೆದು ಸಾಯಿಸಿ ಇವನನ್ನು ಎಂದು ಕೂಗುತ್ತಾ ಮಾರಕಾಸ್ತ್ರದಿಂದ ದರ್ಶನ್ ಬೆನ್ನಿಗೆ ಹೊಡೆದು ಓಡಿಹೋಗಿದ್ದಾರೆ.

ಇದೆಲ್ಲ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಗಳು ಬಂದು ದಾಳಿ ಮಾಡಿದ್ದಾರೆ ಎಂದು ದರ್ಶನ್ ದೂರು ನೀಡಿದ್ದಾರೆ. ಇನ್ನು ಹಲ್ಲೆಗೊಳಗಾದ ದರ್ಶನ್ ಕೂಡ ಬಗ್ಗೆ ಯಾವುದೇ ಒಳ್ಳೆ ಅಭಿಪ್ರಾಯಗಳು ಇಲ್ಲ. ಪೊಲೀಸರ ಮಾಹಿತಿ ಪ್ರಕಾರ ದರ್ಶನ್‌ ಕೂಡ ಸ್ವಲ್ಪ ಪುಂಡನಾಗಿದ್ದು, ಯಾವುದೋ ಹಳೆಯ ದ್ವೇಷಕ್ಕೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:Crime News: ನಡುರಸ್ತೆಯಲ್ಲಿ ಗಂಡನಿಂದ ಚಾಕು ಇರಿತ, ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

ಇದರ ಜತೆಗೆ ದರ್ಶನ್ ತನಿಖೆಗೆ ಸಹಕರಿಸುತ್ತಿಲ್ಲ, ದಾಳಿ ಮಾಡಿದವರು ಯಾರು ಎಂದು ಕೇಳಿದ್ದರೆ ಗಂಟೆಗೊಂದು ಹೇಳಿಕೆಯನ್ನು ನೀಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ. ಕಾಲೇಜು ಸುತ್ತಮುತ್ತ ಇನ್ನೂ ಈ ಘಟನೆಯಿಂದ ಇತರೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೂ ಆತಂಕ ಶುರುವಾಗಿದೆ. ಮೇಲ್ನೋಟಕ್ಕೆ ಇದು ಹುಡುಗಿ ವಿಚಾರಕ್ಕೆ ನಡೆದಿರಬಹುದಾದ ದಾಳಿ ಎಂಬ ಶಂಕೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version