ರಾಯಚೂರು: ಇಲ್ಲಿನ ಲಿಂಗಸಗೂರು ಹೊರ ವಲಯದ ಕರಡಕಲ್ ಬಳಿ ಕೆಲ ಕಿಡಿಗೇಡಿಗಳ ಗುಂಪೊಂದು ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸ ವರ್ಷದ ಭರ್ಜರಿ ಪಾರ್ಟಿ ಮುಗಿಸಿ ಕುಡಿತದ ನಶೆಯಲ್ಲಿದ್ದ ಸುಮಾರು 8-10 ಜನರ ಗುಂಪು ಮಧ್ಯರಾತ್ರಿ 2 ಗಂಟೆಗೆ ಹಾಸ್ಟೆಲ್ ಏಕಾಏಕಿ ನುಗ್ಗಿದೆ. ಬಳಿಕ ಎದುರಿಗೆ ಸಿಕ್ಕ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಎಲ್ಲರೂ ಸೇರಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತಿಮ್ಮನಗೌಡ, ವೆಂಕಟೇಶ್ ತೀವ್ರ ಹಲ್ಲೆಗೊಳಗಾಗಿದ್ದು, ಇವರನ್ನು ಬಾಗಲಕೋಟೆ ಕೆರೋಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಇಬ್ಬರು ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಯಿಂದ ಹಲವು ವಿದ್ಯಾರ್ಥಿಗಳು ಭಯಭೀತರಾಗಿದ್ದು, ಹಾಸ್ಟೆಲ್ ತೊರೆಯಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳ ಮನವೊಲಿಕೆಗೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಸಮರ್ಪಕ ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ ಸೌಲಭ್ಯಗಳು ಇಲ್ಲ. ನಮಗೆ ಬೇರೆ ವಸತಿ ನಿಲಯ ವ್ಯವಸ್ಥೆ ಮಾಡಿ ಕೊಡಿ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Elephant attack | ರೈತನ ಮೇಲೆ ದಾಳಿ ಮಾಡಿದ್ದ ಪುಂಡಾನೆ ಸೆರೆ; ನಿಟ್ಟುಸಿರು ಬಿಟ್ಟ ಗಡಿ ಜಿಲ್ಲೆ ಜನ