Site icon Vistara News

Assault Case: ಹೇರ್‌ ಕಟಿಂಗ್‌ ನಾಳೆ ಮಾಡ್ತಿನಿ ಎಂದಿದ್ದಕ್ಕೆ ಶಾಪ್‌ನೊಳಗಿದ್ದ ವಸ್ತುಗಳನ್ನು ಕೆರೆಗೆ ಎಸೆದ ದುರುಳರು

#image_title

ಗದಗ: ಇಲ್ಲಿನ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹೇರ್‌ ಕಟಿಂಗ್‌ (Hair Cutting) ವಿಚಾರಕ್ಕೆ ಗ್ರಾಹಕನೊಬ್ಬ ಕೋಪಗೊಂಡು ದಾಂಧಲೆ ಮಾಡಿದ್ದಾನೆ. ಕಟಿಂಗ್‌ ನಾಳೆ ಮಾಡುತ್ತೇನೆ ಎಂದಿದ್ದಕ್ಕೆ ಕ್ಷೌರಿಕನ ಅಂಗಡಿ ಮೇಲೆ ದಾಳಿ ಮಾಡಿ ಕಿಡಿಗೇಡಿಯೊಬ್ಬ ದರ್ಪ (Assault Case) ತೋರಿದ್ದಾನೆ.

ವಿಠ್ಠಲ ಹಡಪದ ಎಂಬುವವರ ಕಟಿಂಗ್‌ ಶಾಪ್‌ಗೆ ತಡರಾತ್ರಿ ನುಗ್ಗಿ ಬೀಗ ಮುರಿದಿರುವ ಕಿಡಿಗೇಡಿಯೊಬ್ಬ, ಕಟಿಂಗ್ ಶಾಪ್‌ನ ಚೇರ್, ಕತ್ತರಿ, ಮೇಕಪ್ ವಸ್ತುಗಳನ್ನು ಕೆರೆಗೆ ಎಸೆದು ದುಷ್ಕೃತ್ಯ ಮೆರೆದಿದ್ದಾನೆ.

ವಿಠ್ಠಲ್‌ ಅವರಿಗೆ ತಡರಾತ್ರಿ 11 ಗಂಟೆ ಸುಮಾರಿಗೆ ಅಪರಿಚಿತನೊಬ್ಬ ಫೋನ್‌ ಮಾಡಿ, ಹೇರ್‌ ಕಟಿಂಗ್ ಮಾಡುವಂತೆ‌ ಹೇಳಿದ್ದಾನೆ. ರಾತ್ರಿಯಾಗಿದ್ದು ಅಂಗಡಿಯಲ್ಲಿ ಕರೆಂಟ್ ವ್ಯವಸ್ಥೆ ಇಲ್ಲ. ಹೀಗಾಗಿ ಬೆಳಗ್ಗೆ ಮಾಡುತ್ತೇನೆ ಎಂದಿದ್ದಾರೆ. ಇದಾದ ಬಳಿಕ ಎದ್ದು‌ ಅಂಗಡಿಯತ್ತ ಬಂದಾಗ ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ. ಅಂಗಡಿಯಲ್ಲಿನ‌ ವಸ್ತುಗಳನ್ನೆಲ್ಲ ಕೆರೆಗೆ ಎಸೆದಿದ್ದಾರೆ.

ಇದನ್ನೂ ಓದಿ: Karnataka Rain: ರಾಜ್ಯಾದ್ಯಂತ ಇನ್ನೆರಡು ದಿನ ವರುಣಾರ್ಭಟ; ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

ಇವರ ಕೃತ್ಯದಿಂದ ನಷ್ಟವನ್ನುಂಟು ಅನುಭವಿಸಿರುವ ವಿಠ್ಠಲ್‌ ದೂರು ನೀಡಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version