Site icon Vistara News

Assault Case : ಇಸ್ಲಾಂ ಹೆಸರಲ್ಲಿ ವಿವಾದಿತ ಪೋಸ್ಟ್‌; ರಾಯಚೂರಲ್ಲಿ ಎರಡು ಕೋಮಿನ ನಡುವೆ ಗಲಾಟೆ

clash between hindu muslim in raichur

ರಾಯಚೂರು: ಮುಸ್ಲಿಂ ಯುವಕನೊಬ್ಬ ಹಿಂದು ದೇಗುಲದ ಪ್ರಾಂಗಣದಲ್ಲಿ ಮಲಗಿ ಹೈಡ್ರಾಮಾ ಸೃಷಿಸಿದ ಘಟನೆ ರಾಯಚೂರಲ್ಲಿ ನಡೆದಿದೆ. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಯುವಕನ ಜುಟ್ಟು ಹಿಡಿದು ಹೊರಗೆ ಹಾಕಿದ್ದಾರೆ. ರಾಯಚೂರಿನ (Raichur News) ಸಿಂಧನೂರು ತಾಲೂಕಿನ ಬಂಗಾಳಿ ಕ್ಯಾಂಪ್‌ 2ರಲ್ಲಿ ಉದ್ವಿಗ್ನ ಪರಿಸ್ಥಿತಿ (Assault case) ನಿರ್ಮಾಣವಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ (Instagram post‌) ಯುವತಿ ಹೆಸರಿನ ಖಾತೆ ಮೂಲಕ ಅಲ್ಲಾ ಹಾಗೂ ಇಸ್ಲಾಂ ಬಗ್ಗೆ ವಿವಾದಾತ್ಮಕ ಪೋಸ್ಟ್‌ವೊಂದು ಹಾಕಿದ್ದಾಗಿ ಆರೋಪವೊಂದು ಕೇಳಿ ಬಂದಿದೆ.

ಪೋಸ್ಟ್‌ ವಿವಾದ ರಾಯಚೂರಲ್ಲಿ ಅನ್ಯಕೋಮಿನ ಗಲಾಟೆ

ಈ ಪೋಸ್ಟ್‌ ಸೋಶಿಯಲ್‌ ಮೀಡಿಯದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ವಿಚಾರಿಸಲು ಮುಸ್ಲಿಂ ಯುವಕರ ಗುಂಪು ಕ್ಯಾಂಪ್‌ಗೆ ಬಂದಿದ್ದು, ಈ ವೇಳೆ ಎರಡೂ ‌ಕೋಮಿನ‌ ಯುವಕರ ‌ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ‌ಮಾತು ಬೆಳೆದು ಅನ್ಯ ಕೋಮಿನವರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಂಧನೂರು ಪಟ್ಟಣದಿಂದ 60ಕ್ಕೂ ಹೆಚ್ಚು ಯುವಕರು ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸಿ ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದಾರೆ.

ಇದನ್ನೂ ಓದಿ: Murder Case: ದೇವಸ್ಥಾನದಲ್ಲಿ ಹೆಂಡತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ: ಅಮಾವಾಸ್ಯೆ ದಿನ ಹರಿದ ನೆತ್ತರು

ದೇವಸ್ಥಾನ ಪ್ರವೇಶಿಸಲು ಯತ್ನ

ಇದೇ ವೇಳೆ ಅಕ್ರಮವಾಗಿ ಹಿಂದೂ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಬರ್, ಶಾಮೀದ್, ತಾಜುದ್ದೀನ್, ಸಮೀರ್ ಎಂಬುವವರ ಬಂಧನವಾಗಿದ್ದು, 30ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಬಂಗಾಳಿ ಕ್ಯಾಂಪ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ದೇಗುಲದೊಳಗೆ ಮಲಗಿ ಹೈಡ್ರಾಮಾ

ಹಿಂದೂ ದೇವಸ್ಥಾನಕ್ಕೆ ಪ್ರವೇಶಿಸಿದ ಮುಸ್ಲಿಂ ಯುವಕ ಹೈಡ್ರಾಮಾ ಸೃಷ್ಟಿಸಿದ್ದಾನೆ. ಇದಕ್ಕೆ ಗ್ರಾಮಸ್ಥರೆಲ್ಲರೂ ಕೆಂಡಕಾರಿದ್ದು, ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ದುರ್ಗಾದೇವಿ ದೇಗುಲದ ಪ್ರಾಂಗಣದಲ್ಲಿ ಮಲಗಿದ್ದ ಯುವಕನ ತಲೆಯ ಜುಟ್ಟು ಹಿಡಿದು ಹೊರ ಹಾಕಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version