Site icon Vistara News

Assault Case: ಡಿಸ್ಕೌಂಟ್‌ ಸೇಲ್‌ನಲ್ಲಿ ಮೈಸೂರು ಸಿಲ್ಕ್‌ ಸೀರೆಗಾಗಿ ಮಹಿಳೆಯರಿಬ್ಬರ ಗಲಾಟೆ; ಜಡೆ ಹಿಡಿದು ಫೈಟಿಂಗ್‌

#image_title

ಬೆಂಗಳೂರು: ಸೀರೆಗಳೆಂದರೆ ಹೆಂಗಳೆಯರಿಗೆ ಪಂಚಪ್ರಾಣ. ಅದರಲ್ಲೂ ಮೈಸೂರ್‌ ಸಿಲ್ಕ್‌ ಸ್ಯಾರಿ ಎಂದರೆ ಕೇಳಬೇಕಾ? ಒಂದು ರೀತಿಯ ವಿಶೇಷ ಆಕರ್ಷಣೆ ಇರುವುದು ಸತ್ಯ. ಈ ಸೀರೆಗಳು ಕಡಿಮೆ ದರದಲ್ಲಿ ಸಿಗುತ್ತದೆ ಎಂದರೆ ಸಾಕು ನಾ ಮುಂದು ತಾ ಮುಂದು ಎಂದು ಊಟ, ನಿದ್ದೆ ಬಿಟ್ಟು ಕ್ಯೂನಲ್ಲಿ ನಿಂತು ಬಿಡುತ್ತಾರೆ. ಹೀಗೆ ಈ ಸಿಲ್ಕ್‌ ಸೀರೆಗಾಗಿ (Mysuru silk sarees) ಮಹಿಳೆಯರಿಬ್ಬರು ಜಡೆಗಳನ್ನು ಹಿಡಿದು ಎಳೆದಾಡಿ (Assault Case) ಬಡಿದಾಡಿಕೊಂಡಿದ್ದಾರೆ.

ಮಲ್ಲೇಶ್ವರದ 8ನೇ ಕ್ರಾಸ್‌ನಲ್ಲಿರುವ ಕೆನರಾ ಯೂನಿಯನ್‌ ಹಾಲ್‌ನಲ್ಲಿ ಕರ್ನಾಟಕ ಸಿಲ್ಕ್‌ ಎಂಪೋರಿಯಮ್‌ (ಕೆ.ಎಸ್.ಐ.ಸಿ) ತನ್ನ ಎರಡನೇ ಡಿಸ್ಕೌಂಟ್‌ ಸೇಲ್‌ ಹಾಕಿದೆ. ಏ. 19ರಿಂದ ಶುರುವಾದ ಈ ಸೇಲ್‌ನಲ್ಲಿ 23 ಭಾನುವಾರಕ್ಕೆ ಕೊನೆಗೊಳ್ಳುತ್ತಿದೆ. ಸಿಲ್ಕ್‌ ಸೀರೆಗಳ ಮೇಲೆ ಶೇ. 35ರಷ್ಟು ಡಿಸ್ಕೌಂಟ್‌ ಹಾಕಿದ ಹಿನ್ನೆಲೆಯಲ್ಲಿ ಮಹಿಳೆಯರು ಎಲ್ಲರೂ ಕಡೇ ದಿನದ ಸೇಲ್‌ಗಾಗಿ ಮುಗಿಬಿದ್ದಿದ್ದರು.

ಈ ವೇಳೆ ಸೀರೆ ಆಯ್ದುಕೊಳ್ಳವ ವಿಚಾರಕ್ಕೆ ಮಹಿಳೆಯರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಬಳಿಕ ಪರಸ್ಪರ ಜಡೆಗಳನ್ನು ಹಿಡಿದು ಕಿತ್ತಾಡಿಕೊಂಡಿದ್ದಾರೆ. ಇವರು ಕಿತ್ತಾಡಿಕೊಂಡಿರುವ ವಿಡಿಯೊವನ್ನು ಇತರೆ ಗ್ರಾಹಕರು ಮೊಬೈಲ್‌ನಲ್ಲಿ ಸೆರೆಯಿಡಿದ್ದಾರೆ. ಇತ್ತ ನಾರಿಮಣಿಯರ ಮಾರಾಮಾರಿ ಬಿಡಿಸಲು ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ವಿಫಲವಾದರು.

ಇದನ್ನೂ ಓದಿ: Road Accident : ಏರು ಹತ್ತಲಾಗದೇ ಹಿಂದಕ್ಕೆ ಬಂದು ಕಾರಿನ ಮೇಲೆ ಬಿದ್ದ ಲಾರಿ; ಒಬ್ಬನ ಕಾಲು ನಜ್ಜುಗುಜ್ಜು

ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಸ್ಥಳೀಯರೇ ಇಬ್ಬರು ಮಹಿಳೆಯರ ಜಗಳ‌ ಬಿಡಿಸಿ, ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

Exit mobile version