Site icon Vistara News

Assembly Session : ಸದನದಲ್ಲಿ ಮಾತನಾಡಲು ಬಿಡದ ಕಾಂಗ್ರೆಸ್‌ಗೆ ಬಿಜೆಪಿಯಿಂದ 10 ಪ್ರಶ್ನೆ

BJP 10 Questions

ಬೆಂಗಳೂರು: ವಿಧಾನ ಮಂಡಲ ಅಧಿವೇಶನದ (Assembly session) ಸಂದರ್ಭದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಕಾಂಗ್ರೆಸ್‌ ಸರ್ಕಾರ (Congress Government) ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಪ್ರಜಾಪ್ರಭುತ್ವದ ಧ್ವನಿಗೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಆಪಾದಿಸಿದೆ. ಅರ್ಹತೆ ಇಲ್ಲದ ಅಸಮರ್ಥ ಕಾಂಗ್ರೆಸ್‌ (@INCKarnataka) ಸರ್ಕಾರ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡದೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂದಿರುವ ಬಿಜೆಪಿ ರಾಜ್ಯ ಸರ್ಕಾರಕ್ಕೆ ಟ್ವಿಟರ್‌ ಮೂಲಕ 10 ಪ್ರಶ್ನೆಗಳನ್ನು ಕೇಳಿದೆ.

ಇದರಲ್ಲಿ ಪ್ರತಿಪಕ್ಷಗಳ ಕೂಟದ ಸಭೆಗೆ ಐಎಎಸ್‌ ಅಧಿಕಾರಿಗಳನ್ನು (Misuse of IAS Officers) ಬಳಸಿಕೊಂಡಿರುವುದು, ಬೆಂಗಳೂರಿನಲ್ಲಿ ಬಂಧಿತರಾದ ಉಗ್ರರಿಗೆ ಗೃಹ ಸಚಿವರು ಕ್ಲೀನ್‌ ಚಿಟ್‌ (Clean Chit by Home minister) ಕೊಟ್ಟಿದ್ದು, ರೈತರ ಆತ್ಮಹತ್ಯೆ ಸೇರಿದಂತೆ ಹತ್ತು ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ.

ಬಿಜೆಪಿ ಕೇಳಿದ ಪ್ರಶ್ನೆಗಳು ಇವು

1️⃣ ಖಾಸಗಿ ರಾಜಕೀಯ ಕಾರ್ಯಕ್ರಮಕ್ಕೆ ಅನೈತಿಕವಾಗಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಹೇಗೆ..?

2️⃣ ಬಂಧಿತ ಐವರು ಉಗ್ರರ ವಿರುಧ್ಧ ಪ್ರೈಮಾಫೇಸಿ ಸಾಕ್ಷಿಗಳಿದ್ದರೂ ಗೃಹ ಸಚಿವರು ಕ್ಲೀನ್ ಚೀಟ್ ಕೊಟ್ಟಿದ್ದೇಕೆ..?

3️⃣ ಮುಂಗಾರು ಕೈಕೊಟ್ಟು ಕಂಗಾಲಾದ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. 42 ರೈತರು ಸಾವಿಗೆ ಶರಣಾಗಿದ್ದಾರೆ. ಸರಕಾರದ ಕ್ರಮಗಳೇನು..?

4️⃣ ಕಾನೂನು ಸುವ್ಯವಸ್ಥೆ ಹದಗೆಟ್ಟು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶೇಕಡಾ 35 ರಷ್ಟು ಕ್ರೈಮ್ ರೇಟ್ ಹೆಚ್ಚಾಗಿದೆ. ಗೃಹ ಸಚಿವರು ಮಾಡುತ್ತಿರುವುದಾದರೂ ಏನು..?

5️⃣ ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗದ್ದುಗೆ ಹಿಡಿದು ಇದೀಗ ಕಂಡೀಷನ್ ಹಾಕಿದ್ದು ಅಲ್ಲದೆ, ಅದನ್ನು ಜಾರಿ ಮಾಡದೆ ಕಾಲ ಹರಣ ಮಾಡುತ್ತಿರುವುದು ಏಕೆ..?

6️⃣ ತರಕಾರಿ, ಹಾಲು, ವಿದ್ಯುತ್, ನೀರು ಹೀಗೆ ಎಲ್ಲಾ ಬೆಲೆಗಳನ್ನು ಏರಿಸುತ್ತಾ ಜನರ ರಕ್ತವನ್ನು ಹೀರುತ್ತಿರುವುದು ಏಕೆ..?

7️⃣ ನೂರಾರು ಕೋಟಿ ಕೈಬದಲಾಗಿರುವ #ShadowCM ನೇತೃತ್ವದ ವರ್ಗಾವಣೆ ದಂಧೆಗೆ ಕೊನೆ ಎಂದು..?

8️⃣ ಸರಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ಮಾಡುವ, Target ನೀಡುವ ಅಧಿಕಾರ ಸುರ್ಜೇವಾಲಾರಿಗೆ ಕೊಟ್ಟಿದ್ದು ಯಾರು..?

9️⃣ ಕಲುಷಿತ ನೀರು ಪೂರೈಕೆ, ಬಿಸಿಯೂಟದಲ್ಲಿ ವಿಷಪ್ರಾಶನ, ಕೊಳೆತ ಮೊಟ್ಟೆಗಳನ್ನು ಕೊಟ್ಟು ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡುತ್ತಿರುವುದು ಏಕೆ..?

🔟 ರೈತ ವಿರೋಧಿ, ಜನ ವಿರೋಧಿ, ನಾಡ ವಿರೋಧಿ, ಧರ್ಮ ವಿರೋಧಿ ನಿಲುವುಗಳನ್ನು ಕೈಗೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ..?

ವಿಧಾನಸೌಧದ ಹೊರಗಡೆ ಪ್ರತಿಭಟನೆ

ಈ ನಡುವೆ, ಬುಧವಾರ ವಿಧಾನಸಭೆಯಲ್ಲಿ ಸ್ಪೀಕರ್‌ ಸ್ಥಾನದಲ್ಲಿದ್ದ ರುದ್ರಪ್ಪ ಲಮಾಣಿ ಅವರ ಮೇಲೆ ಕಾಗದದ ಚೂರುಗಳನ್ನು ಎಸೆದ ಪ್ರಕರಣದಲ್ಲಿ 10 ಮಂದಿ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಇದರ ವಿರುದ್ಧ ವಿಧಾನಸೌಧದ ಹೊರಗಡೆ ಪ್ರತಿಭಟನೆ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: Assembly Session : ಸಿಎಂ ಸನ್ನೆ ಮಾಡಿದ್ದಕ್ಕೆ ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದರು: ಎಚ್‌.ಡಿ. ಕುಮಾರಸ್ವಾಮಿ

Exit mobile version