Site icon Vistara News

Attack on cattle | ರಸ್ತೆ ಬದಿ ನಿಂತಿದ್ದ ಕರುವಿನ ಮೇಲೆ ಕಿಡಿಗೇಡಿಗಳ ದಾಳಿ: ಮಚ್ಚಿನಿಂದ ಕಡಿದ ದುಷ್ಕರ್ಮಿಗಳು

attack on cattle

ಚಿಕ್ಕಮಗಳೂರು: ಆಕಳು ಮತ್ತು ಕರುಗಳ ಮೇಲೆ ಅಮಾನುಷ ರೀತಿಯಲ್ಲಿ ವರ್ತಿಸುವ ವಿದ್ಯಮಾನಗಳು ಪದೇಪದೆ ವರದಿಯಾಗುತ್ತಿದೆ. ಇತ್ತೀಚೆಗೆ ಕೊಡಗಿನಲ್ಲಿ ದುಷ್ಟನೊಬ್ಬ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿದ್ದ ದನದ ಮೇಲೆ ಸಾರ್ವಜನಿಕವಾಗಿಯೇ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇನ್ನೊಂದು ಕಡೆ ಮಲಗಿದ್ದ ಕರುವಿನ ಕೈ ಕಾಲು ಕಟ್ಟಿ ಹಾಕಿ ವ್ಯಕ್ತಿಯೊಬ್ಬ ದೌರ್ಜನ್ಯ ಎಸಗಿದ್ದ. ಈಗ ಚಿಕ್ಕಮಗಳೂರಿನಲ್ಲಿ ಕರುವೊಂದರ ಮೇಲೆ ಮಚ್ಚಿನಿಂದ ಹಲ್ಲೆ (Attack on cattle) ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ರಸ್ತೆ ಬದಿ ನಿಂತಿದ್ದ ಕರುವಿನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಕರುವಿನ ಹಿಂದಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆಗೈಯಲಾಗಿದ್ದು, ಹಿಂಬದಿ ಭಾಗ ಕತ್ತಿಯಿಂದ ಕಡಿದಂತೆ ಸೀಳುಬಿಟ್ಟಿದೆ.

ಮಚ್ಚಿನ ಏಟಿನಿಂದಾಗಿ ಕರುವಿನ ಹಿಂಭಾಗ ಸುಮಾರು ಸುಮಾರು ಒಂದು ಅಡಿಯಷ್ಟು ಸೀಳು ಬಿಟ್ಟಿದೆ. ರಸ್ತೆ ಮಧ್ಯೆ ರಕ್ತಸ್ರಾವದಿಂದ ನರಳಾಡುತ್ತಿದ್ದ ಕರುವನ್ನು ಸ್ಥಳೀಯ ಯುವಕರು ಸೇರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಮ್ರಾನ್‌ ಎಂಬ ಯುವಕನ ನೇತೃತ್ವದಲ್ಲಿ ಟೀಮ್‌ ಮಾನವೀಯ ಕೆಲಸ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ತರಿಕೆರೆ ಪಟ್ಟಣದ ಸಿಸಿ ಟಿವಿ ಫೂಟೇಜ್‌ಗಳನ್ನು ಗಮನಿಸಲಾಗುತ್ತಿದ್ದು, ಹಲ್ಲೆ ಮಾಡಿದ ದುಷ್ಕರ್ಮಿಗಳ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | Sexual assault on cow | ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಕೃತಕಾಮಿ

Exit mobile version