Site icon Vistara News

Crime | ಶ್ರೀರಾಮಸೇನೆ ಮುಖಂಡನ ಮೇಲೆ ದಾಳಿ, ಮಾರಕಾಸ್ತ್ರಗಳಿಂದ ಹಲ್ಲೆ

Crime

ಬೀದರ್:‌ ತಾಲೂಕಿನ ಮಮದಾಪೂರದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಕ್ಯಾಮಾ ಮೇಲೆ ದಾಳಿ ನಡೆಸಲಾಗಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ (Crime) ನಡೆಸಲಾಗಿದೆ. ಬುಧವಾರ ರಾತ್ರಿ ೮.೪೫ರ ಸುಮಾರಿಗೆ ಗ್ರಾಮದಲ್ಲಿ ಜನರ ಜತೆ ಮಾತನಾಡುವಾಗ ದಾಳಿ ನಡೆಸಲಾಗಿದೆ.

ಮಮದಾಪುರ ಗ್ರಾಮದವರೇ ಆದ ಧನರಾಜ ಸೇರಿ ಹಲವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವೀರಶೆಟ್ಟಿ ಕ್ಯಾಮಾ ಅವರ ಕುತ್ತಿಗೆ, ಬೆನ್ನು ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಸದ್ಯ ಅವರು ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ | ನಡುಬೀದಿಯಲ್ಲಿ ಮಹಿಳೆಯ ಮೇಲೆ ಮೂವರಿಂದ ಹಿಗ್ಗಾಮುಗ್ಗಾ ಹಲ್ಲೆ, ಬೆನ್ನಟ್ಟಿ ಬಡಿದ ಸಂಬಂಧಿಕರು

Exit mobile version