Site icon Vistara News

Puneeth Rajkumar: ಅಪ್ಪು ಜನ್ಮದಿನವೇ ಅವರ ಘನತೆಗೆ ಧಕ್ಕೆ ತರಲು ಯತ್ನ, ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದೇನು?

Attempt to defame Puneeth Rajkumar's name on his Birthday, what is the trend on Twitter?

ಪುನೀತ್‌ ರಾಜಕುಮಾರ್

ಬೆಂಗಳೂರು: ಮಾರ್ಚ್‌ 17ರಂದು ಪುನೀತ್‌ ರಾಜಕುಮಾರ್‌ (Puneeth Rajkumar) ಅವರ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಲಾಗಿದೆ. ಪುನೀತ್‌ ಅಭಿಮಾನಿಗಳು ಅನ್ನದಾನ ಸೇರಿ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿದ್ದಾರೆ. ರಾಘವೇಂದ್ರ ರಾಜಕುಮಾರ್‌ ಅವರೂ ಅನ್ನದಾನದ ಮೂಲಕ ಅಗಲಿದ ಸಹೋದರನಿಗೆ ಗೌರವ ಸಲ್ಲಿಸಿದ್ದಾರೆ. ಸ್ಯಾಂಡಲ್‌ವುಡ್‌ ನಟ-ನಟಿಯರು, ಹಿರಿಯರೂ ನಟನನ್ನು ಸ್ಮರಿಸಿದ್ದಾರೆ. ಇದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್‌ ರಾಜಕುಮಾರ್‌ ಅವರ ಹೆಸರಿಗೆ ಧಕ್ಕೆ ತರಲು ಒಂದಷ್ಟು ಜನ ಮುಂದಾಗಿದ್ದಾರೆ.

ಟ್ವಿಟರ್‌ನಲ್ಲಿ #DrugPeddlerPuneeth #PuneethCharityScam ಎಂಬ ಹ್ಯಾಷ್‌ಟ್ಯಾಗ್‌ಗಳ ಮೂಲಕ ಪುನೀತ್‌ ರಾಜಕುಮಾರ್‌ ವಿರುದ್ಧ ವದಂತಿಗಳನ್ನು ಹರಡಿಸಲಾಗುತ್ತಿದೆ. ಪುನೀತ್‌ ಅವರು ಡ್ರಗ್ಸ್‌ ಪೆಡ್ಲರ್‌ ಆಗಿದ್ದರು, ಅವರು ದಾನ-ಧರ್ಮ ಮಾಡಿರುವ ಕುರಿತು ಹರಡಿದ ಸುದ್ದಿಗಳೆಲ್ಲ ಸುಳ್ಳು ಎಂಬುದು ಸೇರಿ ಕುತ್ಸಿತ ಮನಸ್ಸುಗಳು ಪುನೀತ್‌ ವಿರುದ್ಧ ಇಲ್ಲಸಲ್ಲದ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಇದು ಟ್ವಿಟರ್‌ನಲ್ಲಿ ಟ್ರೆಂಡ್‌ ಕೂಡ ಆಗಿದೆ.

ಫ್ಯಾನ್ಸ್‌ ವಾರ್‌ ಹೀಗಿದೆ

ಫ್ಯಾನ್ಸ್‌ ವಾರ್‌ ಹೆಸರಲ್ಲಿ ಕೃತ್ಯ

ಪ್ರತಿಯೊಂದು ಫಿಲಂ ಇಂಡಸ್ಟ್ರಿಯಲ್ಲಿ ಇರುವಂತೆ ಕರ್ನಾಟಕದಲ್ಲೂ ಸ್ಟಾರ್‌ ನಟರ ಫ್ಯಾನ್ಸ್‌ ಮಧ್ಯೆ ಬಿಕ್ಕಟ್ಟಿದೆ. ನಟರು ಪರಸ್ಪರ ಚೆನ್ನಾಗಿದ್ದರೂ, ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಖಾಸುಮ್ಮನೆ ವಾದ, ವಿವಾದ ಮಾಡುತ್ತಾರೆ. ಇಲ್ಲಸಲ್ಲದ ಆರೋಪಗಳ ಮೂಲಕ ತಮಗಿಷ್ಟವಲ್ಲದ ನಟನ ವಿರುದ್ಧ ವದಂತಿ ಹರಡಿಸುತ್ತಾರೆ. ಪುನೀತ್‌ ರಾಜಕುಮಾರ್‌ ಅವರು ಮಾಡಿದ ಸಮಾಜಸೇವೆಯೆಲ್ಲ ಸುಳ್ಳು ಎಂಬುದಾಗಿ ಟೀಕಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಇಂತಹ ಕುತಂತ್ರದ ಭಾಗವಾಗಿಯೇ ಪುನೀತ್‌ ರಾಜಕುಮಾರ್‌ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಿಸಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಒಬ್ಬ ಸ್ಟಾರ್‌ ನಟನ ಅಭಿಮಾನಿಗಳು ಮತ್ತೊಬ್ಬ ಸ್ಟಾರ್‌ ನಟನ ಕುರಿತು ಅವಾಚ್ಯ ಪದಗಳನ್ನು ಬಳಸುವುದು, ಅಸಹ್ಯ ಎನಿಸುವ ಪೋಸ್ಟರ್‌ಗಳನ್ನು ಹರಿಬಿಡುವುದು ಸರಿಯಾದ ಬೆಳವಣಿಗೆಯಲ್ಲ ಎಂಬುದು ಸಿನಿಮಾ ಪ್ರಿಯರ ಆಶಯವಾಗಿದೆ. ಆದರೆ, ಒಬ್ಬ ನಟನ ಮೇಲಿರುವ ಅಭಿಮಾನವು ಮತ್ತೊಬ್ಬ ನಟನ ಮೇಲೆ ದ್ವೇಷ, ಅಸೂಯೆ ಹುಟ್ಟಿಸುತ್ತಿರುವುದು ದುರದೃಷ್ಟವಾಗಿದೆ.

ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

Exit mobile version