ಬೆಂಗಳೂರು/ಅನಂತಪುರ: ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ದೂರಿನನ್ವಯ ಪೊಲೀಸರು ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಅಟ್ಟಿಕಾ ಬಾಬು ಬಂಧಿಸಿದ್ದಾರೆ. ಶೇಕ್ ಮೀನಾಜ್ ಎಂಬವರನ್ನು ಮದುವೆ ಆಗಿದ್ದ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು, ಡಿಸೆಂಬರ್ 12ರಂದು ಯಲ್ಲೂರಿಗೆ ತೆರಳಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ (Attempt To Murder) ಎಂಬ ಆರೋಪ ಕೇಳಿ ಬಂದಿದೆ.
ಪತ್ನಿ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಲ್ಲದೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಶೇಕ್ ಮೀನಾಜ್ ದೂರು ನೀಡಿದ್ದರು. ದೂರಿನ ಅನ್ವಯ IPC ಸೆಕ್ಷನ್ 448, 342, 307, 386, 427, 498A, 506, ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿತ್ತು.
ಕೇಸ್ ದಾಖಲು ಮಾಡಿ ಆರೋಪಿಯನ್ನು ಹುಡುಕಿಕೊಂಡು ಯಲ್ಲೂರು ಪೊಲೀಸರು ಬಂದಿದ್ದರು. ಸಿಸಿಬಿ ಹಾಗೂ ಹೈಗ್ರೌಂಡ್ಸ್ ಪೊಲೀಸರ ಸಹಾಯದಿಂದ ಶುಕ್ರವಾರ ಅಟ್ಟಿಕಾ ಬಾಬು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಯಲ್ಲೂರು ಪೊಲೀಸರು ಅನಂತಪುರಕ್ಕೆ ಕರೆದೊಯ್ದಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಕದ್ದ ಚಿನ್ನ ಪಡೆಯುತ್ತಿದ್ದ ಆರೋಪ
ಅಟ್ಟಿಕ ಗೋಲ್ಡ್ ಬಾಬು ಬಂಧನ ಬೆನ್ನಲ್ಲೇ ಕಳ್ಳರಿಂದ ಕದ್ದ ಚಿನ್ನ ಪಡೆದುಕೊಳ್ಳುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Bear Attack | ಕರಡಿ ದಾಳಿಗೆ ಬಲಿಯಾದ ರೈತ; ಮೃತದೇಹ ಇಟ್ಟು ಕುಟುಂಬಸ್ಥರು, ರೈತರ ಪ್ರತಿಭಟನೆ