ಬೆಂಗಳೂರು/ಹುಬ್ಬಳ್ಳಿ: ಬೆಂಗಳೂರಿನ ಕಾಡುಗೋಡಿಯಲ್ಲಿ ಕುಡಿದ ಅಮಲಿನಲ್ಲಿ ಸ್ನೇಹಿತರೇ ಕಿತ್ತಾಡಿಕೊಂಡಿದ್ದಾರೆ. ಸ್ನೇಹಿತರ ಗಲಾಟೆ ವಿಕೋಪಕ್ಕೆ ಹೋಗಿದ್ದು, ತರಕಾರಿ ಕತ್ತರಿಸುವ ಚಾಕುವಿನಿಂದ ಕೆನ್ನೆಗೆ (Attempt To Murder Case) ಇರಿದಿದ್ದಾರೆ. ಅಜಿತ್ ರಾಜ್ ಮತ್ತು ಅನಿಲ್ ಎಂಬುವವರು ಕುಡಿದು ಗಲಾಟೆ ಮಾಡಿಕೊಂಡವರು.
ಇವರಿಬ್ಬರ ಕಿರುಚಾಟ, ಕೂಗಾಟ ಗಮನಿಸಿ ಅಕ್ಕಪಕ್ಕದ ಮನೆಯವರು 112 ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಗಾಯಾಳು ಅಜೀತ್ ರಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಕುವಿನಿಂದ ಇರಿದಿದ್ದ ಅನಿಲ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಡುಗೊಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕತ್ತರಿಯಿಂದ ಯುವಕನಿಗೆ ಇರಿತ
ಹುಬ್ಬಳ್ಳಿಯ ಆನಂದ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಕತ್ತರಿಯಿಂದ ಇರಿಯಲಾಗಿದೆ. ಇರಿತಕ್ಕೊಳಗಾದ ಪ್ರದೀಪ್ ಕದಮ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಪ್ರದೀಪ್‌ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಮಂಜುನಾಥ್ ಪವಾರ್, ಅಯಾಜ್ ಎಂಬುವವರ ವಿರುದ್ಧ ಕೊಲೆ ಯತ್ನ ದೂರನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Tomato Price : Good News; ಟೊಮ್ಯಾಟೊ ಧಾರಣೆ ದಿಢೀರ್ ಅರ್ಧಕ್ಕರ್ಧ ಕುಸಿತ; ಅಬ್ಬರ ಮುಗೀತಾ?
ಯಾವನೋ ಅವನು ಬಾಸ್ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ
ಮಂಡ್ಯ: ಏರಿಯಾದಲ್ಲಿ ನಮ್ಮದೇ ಹವಾ ಇರಬೇಕು. ಎಲ್ಲರೂ ನನ್ನನ್ನು ಬಾಸ್ ಎಂದರೆ ಓಕೆ, ಇಲ್ಲದಿದ್ದರೇ ಜೋಕೆ ಎಂದು ಪುಡಿ ರೌಡಿಯೊಬ್ಬ ದಾಂಧಲೆ (Assault Case) ನಡೆಸಿದ್ದಾನೆ. ಮಂಡ್ಯದ ಹೊಳಲು ಗ್ರಾಮದಲ್ಲಿ ಯುವಕನ ಮೇಲೆ ಪುಡಿ ರೌಡಿಗಳ ಗ್ಯಾಂಗ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಮಾದ ಅಲಿಯಾಸ್ ಮಾದಪ್ಪ ಎಂಬಾತ ಗ್ಯಾಂಗ್ ಕಟ್ಟಿಕೊಂಡು ಶಾರಂತ್ (29) ಎಂಬಾತ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಭಯವಿಲ್ಲದೆ ಈ ರೌಡಿಗಳು ನಡುರಸ್ತೆಯಲ್ಲಿ ಲಾಂಗ್, ಡ್ರ್ಯಾಗರ್ ಹಿಡಿದು ಓಡಾಡುತ್ತಿದ್ದಾರೆ. ಹುಟ್ಟು ಹಬ್ಬಕ್ಕಾಗಿ ಶಾರಂತ್ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟೂರಿಗೆ ಬಂದಿದ್ದ. ಗ್ರಾಮದ ಸರ್ಕಲ್‌ನಲ್ಲಿ ಶಾರಂತ್ ತನ್ನ ಸ್ನೇಹಿತರ ಜತೆ ಮಾತನಾಡುತ್ತಾ ನಿಂತಿದ್ದ. ಈ ವೇಳೆ ಎರಡು ಬೈಕ್‌ನಲ್ಲಿ ಬಂದ ಮಾದಪ್ಪ ಗ್ಯಾಂಗ್ ಕ್ಯಾತೆ ತೆಗೆದು ಶಾರಂತ್ ಹಲ್ಲೆ ನಡೆಸಿದ್ದಾರೆ.
ಮಾದಪ್ಪ, ಚಿಂಟು, ತರುಣ್, ಸುಶಾಂತ್, ಚಂದನ್ ಮನಬಂದಂತೆ ಥಳಿಸಿದ್ದಾರೆ. ಲಾಂಗ್ ಬೀಸಿದ್ದರಿಂದ ಶಾರಂತ್ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾನೆ. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಶಾರಂತ್‌ಗೆ 16 ಸ್ಟಿಚ್ ಹಾಕಿದ್ದಾರೆ.
ಯಾವನೋ ಬಾಸ್?
ಈ ಹಿಂದೆ ಮಾದಪ್ಪನಿಗೆ ಬಾಸ್ ಎನ್ನುವಂತೆ ಮಾದನ ಸ್ನೇಹಿತರು ಶಾರಂತ್‌ಗೆ ಅವಾಜ್ ಹಾಕಿದ್ದರು. ಆಗ ಶಾರಂತ್ ಅವನು ಯಾವನೋ ಬಾಸ್ ಎಂದು ಟಾಂಗ್ ಕೊಟ್ಟಿದ್ದ ಎನ್ನಲಾಗಿದೆ. ಅಂದು ಬಾಸ್ ಗಲಾಟೆ ನಡೆದು ತಣ್ಣಗಾಗಿದ್ದ ವೈಮನಸ್ಸು ಹಾಗೆ ಮುಂದುವರಿದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡು ಶಾರಂತ್ ಮೇಲೆ ಮಾದಪ್ಪ ಟೀಂ ಬರ್ತ್ ಡೇ ದಿನ ಕ್ಯಾತೆ ತೆಗೆದು ಲಾಂಗ್‌ನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರ ಹಲ್ಲೆ ನಡೆಸಿ ಮಾದಪ್ಪ ಗ್ಯಾಂಗ್ ಪರಾರಿ ಆಗಿದ್ದು, ಪೊಲೀಸರು ಪುಡಿರೌಡಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ