Site icon Vistara News

Suicide Case : ಹೈವೋಲ್ಟೇಜ್ ಟವರ್ ಏರಿ ಆತ್ಮಹತ್ಯೆಗೆ ಯತ್ನ; ಸಾಲಬಾಧೆಗೆ ನೇಣಿಗೆ ಶರಣಾದ ರೈತ

High voltage tower

ಹಾವೇರಿ/ ಆನೇಕಲ್‌: ಹಾವೇರಿಯ ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Suicide Case )ಸಾಲಬಾಧೆಗೆ ರೈತರೊಬ್ಬರು ನೇಣುಬಿಗಿದುಕೊಂಡಿದ್ದಾರೆ. ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದ ರೈತ ಶಿವನ ಗೌಡ ಹೊಸಮನಿ ಮೃತರು.

ಶಿವನ ಗೌಡ ಹೊಸಮನಿ ಕೃಷಿ ಮತ್ತು ಮನೆ ಕೆಲಸಕ್ಕೆ ಸಾಲ ಮಾಡಿಕೊಂಡಿದ್ದರು. ಕುರುಬಗೊಂಡದ ಯೂನಿಯನ್ ಬ್ಯಾಂಕ್‌ನಲ್ಲಿ 7 ಲಕ್ಷ ರೂ ಹಾಗೂ ಹಾವೇರಿಯ ಮಹೇಂದ್ರ ಫೈನಾನ್ಸ್‌ನಲ್ಲಿ 75,000 ರೂ. ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲು ಆಗದೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಶಿವನ ಗೌಡ ಇಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಯತ್ನ

ಜಮೀನು ವಿವಾದಕ್ಕೆ ಟವರ್‌ ಏರಿದ ಭೂಪ

ಜಮೀನು ವಿವಾದ ಹಿನ್ನೆಲೆ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆ ಬಳಿ ಘಟನೆ ನಡೆದಿದೆ. ಕೆಲಮಂಗಲದ ರವಿ ಎಂಬಾತ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದವರು.

ಇದನ್ನೂ ಓದಿ: Doctor Kindness: ಅಪಘಾತದಲ್ಲಿ ಮೆದುಳು ಹೊರಬಂದ ಮಹಿಳೆಗೆ ತುರ್ತು ಚಿಕಿತ್ಸೆಯಿಂದ ಪುನರ್ಜನ್ಮ; ವೈದ್ಯರಿಗೆ ಮೆಚ್ಚುಗೆ

ರವಿಗೆ ಮನವೊಲಿಸಿ ಕೆಳಗಿಸಿದ ಪೊಲೀಸರು

ರವಿಗೆ ಮುನಿರಾಜು ಎಂಬಾತನೊಂದಿಗೆ ಜಮೀನು ವ್ಯಾಜ್ಯ ನಡೆಯುತ್ತಿತ್ತು. ಹೀಗಾಗಿ ಕೆಲಮಂಗಲ ಪೊಲೀಸರು ಇಬ್ಬರನ್ನು ಕರೆದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸರು ಮುನಿರಾಜು ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ರವಿ ಆರೋಪವಾಗಿದೆ. ಹೀಗಾಗಿ ಡೆಂಕಣಿಕೋಟೆ ಬಳಿಯ ಹೈವೋಲ್ಟೇಜ್ ಟವರ್ ಹತ್ತಿದವರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಡೆಂಕಣಿಕೋಟೆ ಪೊಲೀಸರು ಭೇಟಿ ನೀಡಿ ರವಿಯ ಮನವೊಲಿಸಿ ಕೆಳಗಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version