ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಮಠದ (Valmiki Guru Peetha) ಕಿರಿಯ ಸ್ವಾಮೀಜಿಗೆ ಧಮ್ಕಿ ಹಾಕಿರುವುದು ಕಂಡುಬಂದಿದೆ. ನೀವು ಮದುವೆ ಆಗಿರುವುದು ಜನರ ಮುಂದೆ ಹೇಳಲಾ? ನಾನು ಸುಮ್ಮನಿದ್ದರೆ ಸೌಮ್ಯವಾದಿ, ಇಲ್ಲದಿದ್ದರೆ ಉಗ್ರವಾದಿ ಎಂದು ಎಚ್ಚರಿಕೆ ನೀಡಿರುವ ಆಡಿಯೊ ವೈರಲ್ ಆಗಿದೆ.
ಹರಿಹರದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಚಿಕ್ಕಬಳ್ಳಾಪುರದ ವಾಲ್ಮೀಕಿ ಶಾಖಾ ಮಠದ ಬ್ರಹ್ಮಾನಂದ ಸ್ವಾಮೀಜಿ ಅವರ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ. ತಮ್ಮ ವಿರುದ್ಧ ಕೆಲಸ ಮಾಡಿದ್ದಕ್ಕೆ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Pratap Simha: ಸಿಎಂಗೆ ಇಂಥ ದೈನಾಸಿ ಸ್ಥಿತಿ ಬರಬಾರದಿತ್ತು; ಸೋಲಿಸಿ ಎಂದ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಮದುವೆ ಆಗಿದ್ದು, ಹೆಂಡತಿ-ಮಕ್ಕಳಿದ್ದಾರೆ. ಅವರು ಮಠದ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಕೆಲವೊಂದಿಷ್ಟು ಜನರು ಆರೋಪಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿರಿಯ ಸ್ವಾಮೀಜಿಗಳು ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಚಿಕ್ಕಬಳ್ಳಾಪುರದ ವಾಲ್ಮೀಕಿ ಶಾಖಾ ಮಠದ ಬ್ರಹ್ಮಾನಂದ ಶ್ರೀಗಳಿಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Lok Sabha Election 2024 : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟ ಸತೀಶ್ ಜಾರಕಿಹೊಳಿ!
ಸ್ವಾಮೀಜಿಗಳ ಆಡಿಯೊದಲ್ಲಿ ಏನಿದೆ?
ನೀವು ಸ್ವಾಮೀಜಿಯಾಗಿದ್ದು, ಇಂತಹ ಅಯೋಗ್ಯ ಕೆಲಸ ಮಾಡಬಾರದು. ಖಾವಿ ಬಟ್ಟೆ ಧರಿಸಿದ್ದೀರಿ. ಯಾವನೋ ತನ್ನ ಪ್ರಚಾರಕ್ಕೆ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾನೆ. ಅವರ ಮಾತು ಕೇಳಿ ಏನೇನೋ ಮಾತನಾಡಿದರೆ ನಿನ್ನ ಬಟ್ಟೆ ಬಿಚ್ಚಿಡುತ್ತೇನೆ. ನೀವು ಯಾವ ವೇದಿಕೆಯಲ್ಲಿ ಮಾತನಾಡುತ್ತೀರೋ ಅದೇ ವೇದಿಕೆಯಲ್ಲಿ ನಿಮಗೆ ಮದುವೆ ಆಗಿರುವುದನ್ನು ಬಹಿರಂಗ ಮಾಡುತ್ತೇನೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಬ್ರಹ್ಮಾನಂದ ಸ್ವಾಮೀಜಿಗೆ ಹೇಳಿರುವುದು ಆಡಿಯೊದಲ್ಲಿದೆ.