Site icon Vistara News

Auto Accident : ಅತಿವೇಗದ ಚಾಲನೆಗೆ ಹಾರಿಹೋಯ್ತು ಚಾಲಕ ಪ್ರಾಣ; ಕುಡಿತ ತಂದ ಆಪತ್ತು

Auto Accident

ಬೆಂಗಳೂರು: ಕುಡಿದು ಕಂಟ್ರೋಲ್‌ ತಪ್ಪಿದ ಆಟೋ ಚಾಲಕ ಒನ್‌ವೇನಲ್ಲಿ ಹೈ ಸ್ಟೀಡಾಗಿ ಬಂದವನ ಪ್ರಾಣವೇ ಹಾರಿ ಹೋಗಿದೆ. ಅತಿವೇಗವಾಗಿ ಬಂದ ಆಟೋವೊಂದು ರಸ್ತೆಯ ಡಿವೈಡರ್‌ಗೆ ಡಿಕ್ಕಿ (Auto Accident) ಹೊಡಿದಿದೆ. ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಟೋ ಡ್ರೈವರ್ ನಂಜುಂಡಸ್ವಾಮಿ (29) ಮೃತ ದುರ್ದೈವಿ.

ಎಫ್ಟಿಐ ರಿಂಗ್ ರೋಡ್‌ನಿಂದ ಲಗ್ಗೆರೆ ಬ್ರಿಡ್ಜ್ ಕಡೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಆಟೋ ಡ್ರೈವರ್ ನಂಜುಂಡ ಸ್ವಾಮಿ ತನ್ನ ಮೂವರು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ. ಪಾರ್ಟಿ ಮುಗಿಸಿ ಕಿಕ್‌ ಎರಿಸಿಕೊಂಡಿದ್ದ ನಂಜುಂಡ ಸ್ವಾಮಿ ತಡರಾತ್ರಿ 1:30ರ ಸುಮಾರಿಗೆ ರಿಂಗ್ ರೋಡ್‌ನಲ್ಲಿ ಒನ್ ವೇನಲ್ಲಿ ಬಂದಿದ್ದಾನೆ.

ಇದನ್ನೂ ಓದಿ: Suicide Case: ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಅತಿವೇಗವಾಗಿ ಒನ್‌ವೇನಲ್ಲಿ ಆಟೋ ಚಲಾಯಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ್ದು, ಒಮ್ಮೆಲೆಗೆ ಡಿವೈಡರ್‌ಗೆ ಡಿಕ್ಕಿ ಆಗಿದೆ. ಪರಿಣಾಮ ಆಟೋ ಡ್ರೈವರ್‌ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲೇ ರಾತ್ರಿ ಪಾಳಿಯಲ್ಲಿದ್ದ ಆಟೋ ಡ್ರೈವರ್‌ಗಳು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಕೂಲ್‌ ವ್ಯಾನ್‌ ಅಡಿ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ

ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಹಿಂದಿನಿಂದ ಬಂದ ಸ್ಕೂಲ್‌ ವ್ಯಾನ್‌ ಗುದ್ದಿ, ವ್ಯಾನ್‌ ಅಡಿಗೆ ಬಿದ್ದರೂ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಲಭ್ಯವಾಗಿದ್ದು, ನೋಡಿದರೆ ಎದೆ ಝಲ್‌ ಎನ್ನುವಂತಿದೆ.

ಜೂನ್ 26ರಂದು ರಾಧಮ್ಮ ಎಂಬ ಮಹಿಳೆಗೆ ಸ್ಕೂಲ್‌ ವ್ಯಾನ್ ಡಿಕ್ಕಿ ಹೊಡೆದಿತ್ತು. ಸೀತಾ ಸರ್ಕಲ್ ಕಡೆಯಿಂದ ವಿದ್ಯಾಪೀಠದ ಕಡೆಗೆ ಸ್ಕೂಲ್ ವ್ಯಾನ್‌ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ರಸ್ತೆ ದಾಟುವಾಗ ವೇಗವಾಗಿ ಬಂದ ಸ್ಕೂಲ್ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಹಾರಿ ನಡುರಸ್ತೆಗೆ ಬಿದ್ದಿದ್ದು, ವ್ಯಾನ್‌ ಮತ್ತಷ್ಟು ಮುಂದಕ್ಕೆ ಚಲಿಸಿದೆ. ನಡುಭಾಗದಲ್ಲಿ ಮಹಿಳೆ ಸಿಕ್ಕಿಹಾಕಿಕೊಂಡಿದ್ದು, ಚಕ್ರಕ್ಕೆ ಸಿಲುಕಿಲ್ಲ.

ಅಪಘಾತದಲ್ಲಿ ರಾಧಮ್ಮ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ಬಸವನಗುಡಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version