ಮಡಿಕೇರಿ: ಚಲಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು (Auto burnt) ಧಗಧಗನೆ ಉರಿದು ಕರಕಲಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಅಂದಗೋವೆ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಸುಂಟಿಕೊಪ್ಪದ ಆಟೋ ರಿಕ್ಷಾ ಚಾಲಕ ಶಿವರಾಜ್ ನೆನ್ನೆ ರಾತ್ರಿ 9 ಗಂಟೆಗೆ ಸುಂಟಿಕೊಪ್ಪದಿಂದ ಅಂದಗೋವೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯದ ತಿಲಕ ಎಸ್ಟೇಟ್ ಬಳಿ ಚಾಲಕನ ಸೀಟ್ ಬಿಸಿಯಾಗಲಾರಂಭಿಸಿದೆ. ಕೆಳಗಿಳಿದು ನೋಡಿದಾಗ ಸೀಟ್ ಕೆಳಭಾಗದಲ್ಲಿರುವ ಎಂಜಿನ್‌ನ ಸೆನ್ಸಾರ್‌ನಲ್ಲಿ ಬೆಂಕಿ ಕಾಣಿಸಿತು.
ನೋಡನೋಡುತ್ತಿದ್ದಂತೆಯೇ ಬೆಂಕಿ ಏಕಾಏಕಿ ಹೆಚ್ಚತೊಡಗಿದೆ. ಇದರಿಂದ ಭಯಭೀತರಾದ ಶಿವರಾಜ್ ದೂರಕ್ಕೆ ಓಡಿದ್ದಾರೆ. ಮುಂದಿನ ಕೆಲವೇ ಕ್ಷಣಗಳಲ್ಲಿ ಅಗ್ನಿಯ ಕೆನ್ನಾಲಿಗೆ ವ್ಯಾಪಿಸಿ ಆಟೋ ರಿಕ್ಷಾ ಬೆಂಕಿಗೆ ಆಹುತಿಯಾಗಿದ್ದು ಕ್ಷಣಮಾತ್ರದಲ್ಲಿ ಆಟೋ ರಿಕ್ಷ ಸಂಪೂರ್ಣ ಸುಟ್ಟು ಕರಕಲಾಗಿದೆ
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರಕರಣ ಸಂಬಂದ ಸುಂಟಿಕೊಪ್ಪ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ನಡೆದಿದೆ. ಶಿವರಾಜ್ ಅವರು ತಕ್ಷಣ ರಿಕ್ಷಾದಿಂದ ಹಾರಿ ದೂರ ಹೋಗಿದ್ದರಿಂದ ಪ್ರಾಣ ಉಳಿದಿದೆ.
ಇದನ್ನೂ ಓದಿ | Brave hunt | ನಿಲ್ಲಿಸಪ್ಪ ಎಂದರೂ ನಿಲ್ಲಿಸದ ಪಾಪಿ | ಗಾಯಾಳು ಮುತ್ತಪ್ಪ ಚೇತರಿಕೆ, ಹೇಳಿಕೆ ದಾಖಲು