Site icon Vistara News

Murder Case | ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕರಾಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ

auto driver murder

ವಿಜಯಪುರ: ಈ ಹಿಂದೆ ಸಂಸದ ರಮೇಶ್‌ ಜಿಗಜಿಣಗಿ ಅವರ ವಾಹನ ಚಾಲಕರಾಗಿದ್ದು, ಈಗ ರಿಕ್ಷಾ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ.

ವಿಜಯಪುರ ನಗರದ ಅಲಕುಂಟೆ ‌ನಗರದಲ್ಲಿ ನಡೆದ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಚಾಲಕ ಮಲ್ಲಿಕಾರ್ಜುನ ದೊಡಮನಿ (43). ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೊಡಮನಿ ಅವರು ಈ ಹಿಂದೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಾಹನ ಚಾಲಕನಾಗಿ ಕೆಲಸ ಮಾಡಿದ್ದರು. ಮೂರು ವರ್ಷದ ಹಿಂದೆ ಜಿಗಜಿಣಗಿ ಬಳಿ ಕೆಲಸ ಬಿಟ್ಟಿದ್ದ ಮಲ್ಲಿಕಾರ್ಜುನ ಬಳಿಕ ಅಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಹಣಕಾಸು ವ್ಯವಹಾರ ಕಾರಣ?
‌ನಗರದ ಬಾಡರ ಓಣಿಯ ನಿವಾಸಿಯಾಗಿರುವ ಮಲ್ಲಿಕಾರ್ಜುನ ದೊಡಮನಿ ಅವರು ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಅಲೆದಾಡುತ್ತಿದ್ದರು ಎಂದು ಹೇಳಲಾಗಿದೆ. ಹಲವರ ಕೈಯಲ್ಲಿ ಸಾಲ ಮಾಡಿದ್ದ ಅವರ ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಗೆ ಕಾರಣ ಎನ್ನುವ ಸಂಶಯವಿದೆ.

ಮಲ್ಲಿಕಾರ್ಜುನ ಅವರು ಬುಧವಾರ ರಾತ್ರಿ ಸಹೋದರಿ ಶಾಂತವ್ವಳನ್ನು ಆಕೆ ಮನೆಗೆ ಬಿಡಲು ಹೋಗಿದ್ದರು. ಮನೆಯಿಂದ ವಾಪಸ್‌ ಬರುವ ವೇಳೆ ಅವರನ್ನು ತಡೆಗಟ್ಟಿ ಈ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ‌ಎಎಸ್ಪಿ ಶಂಕರ ಮಾರಿಹಾಳ, ಆದರ್ಶ ನಗರ ಪಿಎಸೈ ಯತೀಶ್, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Murder Case | ಸಹೋದರಿಗೆ ಪದೇಪದೆ ಕಿರುಕುಳ ನೀಡುತ್ತಿದ್ದವನನ್ನು ಛತ್ರಿಯ ರಾಡ್‌ನಿಂದ ಇರಿದು ಕೊಂದ ಯುವಕ

Exit mobile version