Site icon Vistara News

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

Actor padhmini Kirk

ಬೆಂಗಳೂರು: ಓಲಾ ಆಟೋ ಬುಕ್‌ ಮಾಡಿ ನಂತರ ಕಿರಿಕ್‌ ತೆಗೆದ ಕಿರುತೆರೆ ನಟಿಯಿಂದಾಗಿ (Auto Driver) ಚಾಲಕರೊಬ್ಬರು ಕೆಲಸ ಕಳೆದುಕೊಂಡಿದ್ದಾರೆ. ನಟಿಯ ವರ್ತನೆಗೆ ಸಾರ್ವಜನಿಕರು ಕಿಡಿಕಾಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುನರ್‌ ವಿವಾಹ ಧಾರಾವಾಹಿಯ ನಟಿ ಪದ್ಮಿನಿ, ಓಲಾ ಮೂಲಕ ಆಟೋವನ್ನು ಬುಕ್‌ ಮಾಡಿದ್ದಾರೆ. ನಂತರ ಸಣ್ಣ ಕಿರಿಕ್‌ ಮಾಡಿ ಚಾಲಕನಿಗೆ ನೀಡಬೇಕಾದ 437 ರೂ. ಹಣವನ್ನೂ ನೀಡದೆ ಹೋಗಿದ್ದಾರೆಂದು ಎಂದು ಚಾಲಕ ದೂರಿದ್ದಾರೆ. ಈ ವಿಡಿಯೊ ಸದ್ಯ ಎಲ್ಲೆಡೆ ವೈರಲ್‌ (Viral News) ಆಗುತ್ತಿದೆ.

ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಓಲಾ ಆಟೋವನ್ನು ಬುಕ್‌ ಮಾಡಿದ ಪದ್ಮಿನಿ ಆಟೋ ಹತ್ತಿದಾಗಲೇ ಕಿರಿಕ್‌ ಶುರು ಮಾಡಿದ್ದಾರೆ. ಹಣ ಜಾಸ್ತಿ ತೋರಿಸುತ್ತಿದೆ ಎಂದು ಆಟೋ ಚಾಲಕನ ಜತೆ ಗರಂ ಆಗಿದ್ದಾರೆ. ನಂತರ ಬನಶಂಕರಿ ಸೆಕೆಂಡ್‌ ಸ್ಟೇಜ್‌ ಲೊಕೇಷನ್‌ ಗೆ ಹೋಗುವ ಸಂದರ್ಭದಲ್ಲಿ ಮಸೀದಿ ಬಳಿಕ ಟ್ರಾಫಿಕ್‌ ಜಾಂ ಆಗಿದೆ.

ಇದನ್ನೂ ಓದಿ: Road Accident : ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸವಾರರು ದಾರುಣ ಸಾವು

ಈ ವೇಳೆ ಯಾಕೆ ಈ ರಸ್ತೆಯಲ್ಲಿ ಬಂದ್ರಿ ಎಂದು ಮತ್ತೆ ಕೋಪ ಮಾಡಿಕೊಂಡಿದ್ದಾರೆ. ನಂತರ ತನಗೆ ತಡವಾಗುತ್ತಿದೆ, ಬೇಗ ಹೋಗಬೇಕು ನಾನು ಇಲ್ಲೆ ಇಳಿತಿನಿ ಎಂದು ಮೀಟರ್‌ ಹಣವನ್ನು ನೀಡದೆ ಹೋಗಿದ್ದಾರೆ. ಹಣ ನೀಡಿ ಎಂದು ಚಾಲಕ ಎಷ್ಟೇ ಬೇಡಿಕೊಂಡರೂ ಕೂಡ ನಟಿ ಹಣವನ್ನು ನೀಡದೆ ಬೇರೆ ಆಟೋ ಹತ್ತಿ ಹೋಗಿದ್ದಾರೆ.

ಬಳಿಕ ನಟಿ ಪದ್ಮಿನಿ ಓಲಾ ಆ್ಯಪ್‌ನಲ್ಲಿ ಡ್ರೈವರ್‌ ದುರ್ವರ್ತನೆ ಎಂದು ರಿಪೋರ್ಟ್‌ ಮಾಡಿದ್ದಾರೆ. ಹೀಗಾಗಿ ಓಲಾ ಕಂಪನಿ ಚಾಲಕನನ್ನು ಆಫ್‌ ಲೈನ್‌ ಮಾಡಿದೆ. ಈ ಸಂಬಂಧ ಆಟೋ ಚಾಲಕ ವಿಡಿಯೊ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಜೀವನಕ್ಕೆ ಇದ್ದ ಕೆಲಸವನ್ನೂ ಕಿತ್ತುಕೊಂಡರು ಎಂದು ವಿಡಿಯೊ ಹರಿಬಿಟ್ಟಿದ್ದಾರೆ. ಸದ್ಯ ನಟಿಯ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version