Site icon Vistara News

Assault Case: ರೈಡ್‌ ಕ್ಯಾನ್ಸಲ್‌ ಮಾಡಿ ಮಹಿಳೆ ಮೇಲೆ ಆಟೊ ಚಾಲಕನ ಅಮಾನುಷ ಹಲ್ಲೆ

Auto rickshaw driver

ಬೆಂಗಳೂರು: ಮಹಿಳಾ ಪ್ರಯಾಣಿಕಳ ಜತೆ ಆಟೋ ಚಾಲಕ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಬೆಳ್ಳಂದೂರಿನಲ್ಲಿ ನಡೆದಿದೆ. ಈ ಬಗ್ಗೆ ದೂರು ಪಡೆದ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ವೈಟ್ ಫೀಲ್ಡ್ ಸಮೀಪದ ತೂಬರಹಳ್ಳಿಗೆ ತೆರಳಲು ಮಹಿಳೆ ಶನಿವಾರ ಆಟೋ ಬುಕ್ ಮಾಡಿದ್ದರು. ಬೆಳಗ್ಗೆ 8.30ಕ್ಕೆ ಆಟೋ ಸ್ಥಳಕ್ಕೆ ಬಂದ ನಂತರ ರೈಡ್‌ ಕ್ಯಾನ್ಸಲ್ ಆಗಿದೆ. ಹೀಗಾಗಿ ಚಾಲಕ ಸಿಟ್ಟಿಗೆದ್ದು ಮಹಿಳೆ ಜತೆ ಗಲಾಟೆ ಮಾಡಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿದ್ದಾನೆ.

ಆಟೋ ಚಾಲಕನ ದುಂಡಾವರ್ತನೆ ತೋರಿದ್ದರಿಂದ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಟೋ ಚಾಲಕ ಅಲ್ಲಿದ್ದ ಪರಾರಿಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಿಸದೇ ಮಹಿಳೆ ಊರಿಗೆ ತೆರಳಿದ್ದಾರೆ.

ಮಹಿಳೆಯ ಸ್ನೇಹಿತನಿಂದ ಪೊಲೀಸರಿಗೆ ದೂರು

ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿರುವ ಮಹಿಳೆಯ ಸ್ನೇಹಿತ ರಾಜೇಶ್‌ ಪ್ರಧಾನ್‌ ಅವರು, ರ‍್ಯಾಪಿಡೋ ಆಟೋ ರೈಡ್‌ ಸುರಕ್ಷಿತವೇ? ಇದು ನ್ಯಾಯವೇ? ಹಲ್ಲೆಗೊಳಗಾದ ಮಹಿಳೆ ನಮ್ಮ ಸ್ನೇಹಿತರಾಗಿದ್ದು, ನಾವು ಅಸಹಾಯಕರಾಗಿದ್ದೇವೆ. ಆಕೆ ಟ್ರೈನ್‌ಗೆ ಹೋಗಬೇಕಿದ್ದರಿಂದ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಟ್‌ಫೀಲ್ಡ್‌ ಡಿಸಿಪಿ, ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ | ಬೀದಿ ದೀಪ ಸರಿ‌ಪಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು; ಕಂಬದಲ್ಲೇ ನೇತಾಡಿದ ಶವ

ಕೈ ಹಾಗೂ ಕತ್ತು ಕೊಯ್ದುಕೊಂಡು ನೇಣಿಗೆ ಶರಣಾದ ಯುವಕ

Anekal Boy Death

ಆನೇಕಲ್/ಮಂಡ್ಯ: ಕೈ ಹಾಗೂ ಕತ್ತುಕೊಯ್ದು ಕೊಂಡು ನೇಣು ಬಿಗಿದಿರುವ ಸ್ಥಿತಿಯಲ್ಲಿ ಯುವಕನ ಮೃತದೇಹವು (Self Harming) ಪತ್ತೆಯಾಗಿದೆ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ಘಟನೆ ನಡೆದಿದೆ. ವಿನಯ್ ಕುಮಾರ್ (24) ಮೃತ ದುರ್ದೈವಿ.

ವಿನಯ್‌ ಸರ್ಜಾಪುರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೊದಲಿಗೆ ಕತ್ತರಿಯಲ್ಲಿ ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತದನಂತರ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಭಾನುವಾರ (ಜ.21) ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಮೊಬೈಲ್ ಸಿಮ್ ತೆಗೆದು ಬಿಸಾಡಿದ್ದಾನೆ. ಮೊಬೈಲ್ ಪೂರ್ತಿ ರೀಸ್ಟಾರ್ಟ್ ಮಾಡಿದ್ದಾನೆ. ಯಾವುದೋ ಬಲವಾದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೆ. ವಿನಯ್‌ಗೆ ಹೆದರಿಸಿ ಯಾರಾದರೂ ಬ್ಲ್ಯಾಕ್‌ ಮೇಲ್ ಮಾಡಿದ್ದರಾ? ಇದರಿಂದ ಭಯಪಟ್ಟು ಆತ್ಮಹತ್ಯೆಗೆ ಶರಣಾದ್ನಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: Medical Negligence : ಗರ್ಭಕೋಶ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆ ಸೇರಿದಳು; ವೈದ್ಯರ ನಿರ್ಲಕ್ಷ್ಯಕ್ಕೆ ಸ್ಮಶಾನದ ಪಾಲಾದಳು

ಸದ್ಯ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಿದ್ದಾರೆ. ಜತೆಗೆ ಯುವಕನ ಮೊಬೈಲ್ ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version