ಬಳ್ಳಾರಿ: ಕೃಷಿ ಕಾರ್ಮಿಕರನ್ನು ಕರೆದೊಯುತ್ತಿದ್ದ ಆಟೋ HLC ಕಾಲುವೆಗೆ ಪಲ್ಟಿಯಾಗಿ ನಾಪತ್ತೆಯಾಗಿದ್ದ ಮೂವರು ಕೃಷಿ ಕಾರ್ಮಿಕರ ಪೈಕಿ ನಿನ್ನೆ ಸಂಜೆ ನಾಗರತ್ನಮ್ಮ ಅವರ ಮೃತದೇಹ ಬಳ್ಳಾರಿ ಸಮೀಪದ ಬಂಡಿಹಟ್ಟಿಯಲ್ಲಿ ಸಿಕ್ಕಿದ್ದರೆ, ಇಂದು ಬೆಳಿಗ್ಗೆ ಉಂತಕಲ್ ಸಮೀಪ ಮಲ್ಲಮ್ಮ(30) ಮೃತದೇಹ ಸಿಕ್ಕಿದೆ. ಇನ್ನೊಬ್ಬರ ಶವದ ಶೋಧ ಮುಂದುವರಿದಿದೆ.
ಬಳ್ಳಾರಿ ತಾಲೂಕಿನ ಕೊಳಗಲ್ ಸಮೀಪದಲ್ಲಿ ನಡೆದ ದುರಂತದಲ್ಲಿ ಐದು ಜನ ಕಾರ್ಮಿಕರನ್ನು ರಕ್ಷಿಸಲಾಗಿತ್ತು. 3 ಕಾರ್ಮಿಕರು ಕಾಲುವೆಯಲ್ಲಿ ನಾತ್ತೆಯಾಗಿದ್ದರು. ಮೂವರ ಶವ ಪತ್ತೆಯಾಗಿತ್ತು. ನಾಗರತ್ನಮ್ಮ ಮೃತ ದೇಹ ಘಟನೆ ನಡೆದ ಸ್ಥಳದಿಂದ 12 ಕಿ.ಮೀ. ದೂರದಲ್ಲಿ ಸಿಕ್ಕಿದೆ. ಮಲ್ಲಮ್ಮ ಶವ 35 ಕಿ.ಮೀ ಅಂತರದಲ್ಲಿ ಸಿಕ್ಕಿದೆ. ಬಳ್ಳಾರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ, ಶವವನ್ನು ವಿಮ್ಸ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಹುಲಿಗೆಮ್ಮ ಅವರ ಮೃತ ದೇಹ ಪತ್ತೆಯಾಗಬೇಕಿದೆ. ಅವರಿಗಾಗಿ ಶೋಧ ಕಾರ್ಯ ನಡೆದಿದೆ.
ಕೊಳಗಲ್ ಗ್ರಾಮದಿಂದ ಕೃಷ್ಣಾನಗರಕ್ಕೆ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಆಟೋದ ಮುಂದಿನ ಚಕ್ರ ಕಲ್ಲಿನ ಮೇಲೆ ಹತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿತ್ತು.
ಇದನ್ನೂ ಓದಿ | ಕಾಲುವೆಗೆ ಆಟೋ ಪಲ್ಟಿ | 6 ಮಂದಿ ಸಾವು, ಐವರ ರಕ್ಷಣೆ