Site icon Vistara News

Navaratri: ಡಿಕೆಶಿ, ಎಚ್‌ಡಿಕೆ ನಿವಾಸದಲ್ಲಿ ಆಯುಧ ಪೂಜೆ ಸಂಭ್ರಮ

DK Shivakumar And HDK

ಬೆಂಗಳೂರು: ರಾಜ್ಯದೆಲ್ಲೆಡೆ ನವರಾತ್ರಿವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಸೋಮವಾರ ಆಯುಧ ಪೂಜೆ ಪ್ರಯುಕ್ತ ಡಿಸಿಎಂ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಸಂಭ್ರಮ ಮನೆಮಾಡಿತ್ತು. ಇಬ್ಬರ ನಾಯಕರ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಡಿ.ಕೆ. ಶಿವಕುಮಾರ್ ಅವರು‌ ಬೆಂಗಳೂರಿನ ನಿವಾಸದಲ್ಲಿ ಮೊದಲಿಗೆ ದೇವರ ಪೂಜೆ ಮಾಡಿದ ನಂತರ ಕುಟುಂಬಸ್ಥರೊಂದಿಗೆ ವಾಹನಗಳ ಪೂಜೆ ನೆರವೇರಿಸಿದರು. ಬಳಿಕ ಬಸವಣ್ಣನ ಆಶೀರ್ವಾದ ಪಡೆದರು.

ಎಚ್‌ಡಿಕೆ ನಿವಾಸದಲ್ಲಿ ಆಯುಧ ಪೂಜೆ

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಬಿಡದಿಯ ತೋಟದ ಮನೆಯಲ್ಲಿ ಆಯುಧ ಪೂಜೆ ಮಾಡಲಾಯಿತು. ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ವಾಹನಗಳಿಗೆ ಪೂಜೆ ಸಲ್ಲಿಸಿದರು. ನಂತರ ಕೆಲಸಗಾರರಿಗೆ ಸಿಹಿ ವಿತರಿಸಲಾಯಿತು.

ಇದನ್ನೂ ಓದಿ | Navaratri: ನವರಾತ್ರಿಯ 9 ದಿನ ದುರ್ಗೆಯ 9 ರೂಪ! ಏನಿದರ ಹಿನ್ನೆಲೆ?

ಬೆಂಗಳೂರಿನ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಆಯುಧ ಪೂಜೆ ಸಲ್ಲಿಸಲಾಯಿತು. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ, ಎಂಎಲ್‌ಸಿ, ಟಿ ಎ ಶರವಣ ಮತ್ತಿತರರು ಉಪಸ್ಥಿತರಿದ್ದರು.

Exit mobile version