ಹಾಸನ: ಇಲ್ಲಿನ ಬೇಲೂರು ತಾಲೂಕಿನ ಕಾನನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಹೆಣ್ಣು ಮರಿಯಾನೆ (Baby Elephant death) ಮೃತಪಟ್ಟಿದೆ. ತಾಯಿಯಿಂದ ದೂರಾಗಿ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮರಿಯಾನೆಯು ಹತ್ತು ದಿನಗಳ ಬಳಿಕ ಕಾಫಿ ತೋಟದಲ್ಲಿ ಜೀವಬಿಟ್ಟಿದೆ.
ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಎರಡು ಬಾರಿ ಕಾಡಾನೆ ಗುಂಪಿನೊಂದಿಗೆ ಸೇರಿಸಿದ್ದರು. ಆದರೆ ಎರಡು ಬಾರಿಯೂ ಕಾಡಾನೆ ಹಿಂಡಿನೊಂದಿಗೆ ಹೋಗದೆ, ಕೋಗೋಡು ಗ್ರಾಮದ ಕಾಫಿ ತೋಟದಲ್ಲಿ ಉಳಿದಿತ್ತು. ಆದರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮರಿಯಾನೆಯನ್ನು ಸೆರೆ ಹಿಡಿದಿದ್ದರು.
ಬಳಿಕ ಮರಿಯಾನೆಯನ್ನು ಅರೇಹಳ್ಳಿ ಬಳಿ ಇದ್ದ ಆನೆ ಗುಂಪಿಗೆ ಬಿಟ್ಟಿದ್ದರು. ಆಗಲೂ ಗುಂಪಿಗೆ ಸೇರದೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ಮರಿಯಾನೆ, ಕಳೆದ 4 ದಿನದ ಹಿಂದಷ್ಟೇ ಕಾಡಾನೆ ಗುಂಪಿಗೆ ಸೇರಿಕೊಂಡಿತ್ತು. ಆದರೆ ಶನಿವಾರ ಕಾಫಿ ತೋಟದಲ್ಲಿ ಮರಿಯಾನೆ ಶವಪತ್ತೆ ಅಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 6-7 ತಿಂಗಳ ಮರಿಯಾನೆಯ ಮೃತದೇಹವನ್ನು ತೋಟದಿಂದ ರವಾನಿಸಿದ್ದಾರೆ.
ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು
ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ಕಾರವಾರದ ಶಿರವಾಡ ಪಬ್ಲಿಕ್ ಸ್ಕೂಲ್‌ನ ಡಿ ದರ್ಜೆ ನೌಕರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆನಂದಿ ಕಾಣಕೋಣಕರ್ (46) ಮೃತ ದುರ್ದೈವಿ. ಕಳೆದ ಆಗಸ್ಟ್ 1 ರಂದು ಶಾಲೆಯ ಜನರೇಟರ್ ಕೊಠಡಿ ಬಳಿ ತೆರಳಿದ್ದಾಗ ಹಾವು ಕಚ್ಚಿತ್ತು. ಅಸ್ವಸ್ತಗೊಂಡಿದ್ದ ಅವರನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕ್ರಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನಂದಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ (ಆ.5) ಮೃತಪಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ