ಮಂಡ್ಯ: ಇಲ್ಲಿನ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ಮಹಾತಾಯಿಯೊಬ್ಬಳು ಬ್ಯಾಗ್‌ನಲ್ಲಿ ನವಜಾತ ಶಿಶುವನ್ನು (Baby found in Mandya) ಇರಿಸಿ ಕಸದ ತಿಪ್ಪೆ ಪಕ್ಕದಲ್ಲಿಟ್ಟು ಹೋಗಿರುವ ಘಟನೆ ನಡೆದಿದೆ.
ತಿಪ್ಪೆ ಪಕ್ಕದಲ್ಲಿ ಮಗು ಅಳುವ ದನಿ ಕೇಳಿ ಸ್ಥಳೀಯರು ಹತ್ತಿರ ಬಂದು ನೋಡಿದಾಗ ಹೆಣ್ಣು ಮಗು ಬ್ಯಾಗ್‌ನಲ್ಲಿ ಇರುವುದು ಗೊತ್ತಾಗಿದೆ. ಕೂಡಲೇ ಮಗುವನ್ನು ರಕ್ಷಣೆ ಮಾಡಿದ್ದು, ಎರಡು ದಿನಗಳ ಹಿಂದಷ್ಟೆ ಜನಿಸಿದ ಹೆಣ್ಣು ಮಗು ಎಂದು ತಿಳಿದು ಬಂದಿದೆ.
ದರ್ಶನ್ ಹಾಗೂ ವರದರಾಜು ಎಂಬುವವರು ಮಗುವನ್ನು ರಕ್ಷಣೆ ಮಾಡಿದ್ದು, ಬಳಿಕ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಿಕ್ಕ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.