ಬೆಂಗಳೂರು: ನವಜಾತ ಗಂಡು ಶಿಶುವನ್ನು (Baby Found) ಯಶವಂತಪುರ ಬಳಿ ಇರುವ ದಾರಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ. ಮಂಗಳವಾರ ತಡರಾತ್ರಿ 2.30ರ ಸುಮಾರಿಗೆ ಆಗಷ್ಟೇ ಜನಿಸಿದ ಗಂಡು ಮಗುವನ್ನು ದೇವಸ್ಥಾನದ ಬಾಗಿಲ ಬಳಿ ಇಟ್ಟು ಹೋಗಿದ್ದಾರೆ.
ಮಧ್ಯರಾತ್ರಿಯಂದು ಒಂದೇ ಸಮನೇ ಮಗು ಅಳುವ ಶಬ್ದ ಕೇಳಿ ಹೊರಗೆ ಬಂದು ನೋಡಿದಾಗ ದೇವಸ್ಥಾನದ ಬಳಿ ಮಗು ಪತ್ತೆ ಆಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಅಮರೇಶ್, ಕೆಂಪರಾಜುರಿಂದ ಮಗುವಿನ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Crime News: ಸುಟ್ಟು ಹೋದ ಕಾರಿನಲ್ಲಿ ಅಪರಿಚಿತ ಶವ ಪತ್ತೆ
ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಚಾಲಕ 30 ನಿಮಿಷ ತಡವಾಗುತ್ತದೆ ಎಂದಿದ್ದಕ್ಕೆ, ಹೊಯ್ಸಳ ವಾಹನದಲ್ಲೇ ಆಸ್ಪತ್ರೆಗೆ ಶಿಶುವನ್ನು ಕರೆದೊಯ್ದು ದಾಖಲಿಸಿದ್ದಾರೆ. ಐಪಿಸಿ 317 ಅಡಿಯಲ್ಲಿ ಯಶವಂತಪುರ ಠಾಣೆಯಲ್ಲಿ (Yeshwantpur Police Station) ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.