ತುಮಕೂರು: ಹುಟ್ಟಿನಿಂದಲೇ ಹೃದಯ ರೋಗ ಸಮಸ್ಯೆ (TAPVC) ಹಾಗೂ ಟ್ರಂಗ್ (Truncus) ರೋಗಕ್ಕೆ ತುತ್ತಾಗಿದ್ದ ಇಬ್ಬರು ಎಳೆಯ ಕಂದಮ್ಮಗಳಿಗೆ ಹೃದಯ ಶಸ್ತ್ರಚಿಕಿತ್ಸೆ (Baby Heart Surgery) ಮಾಡಿ ಯಶಸ್ವಿಯಾದ ಅಪರೂಪದ ಪ್ರಕರಣ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಈ ಸಾಧನೆ ಮಾಡಿದೆ. ಹೈದರಾಬಾದ್ ನಗರದ 20 ದಿನಗಳ ಹಸುಗೂಸೊಂದು TAPVC ಸಮಸ್ಯೆಯಿಂದ ಬಳಲುತ್ತಿತ್ತು. ತುಮಕೂರಿನ 3 ತಿಂಗಳಿನ ಮತ್ತೊಂದು ಮಗು ಟ್ರಂಕಸ್ (Truncus) ರೋಗಕ್ಕೆ ತುತ್ತಾಗಿತ್ತು.
ಈ ಇಬ್ಬರು ಮಕ್ಕಳಿಗೆ ಆಗಿರುವ ಹೃದಯ ಶಸ್ತ್ರಚಿಕಿತ್ಸೆ ಅತಿ ಸೂಕ್ಷ್ಮವಾಗಿದ್ದು, ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮುಂದೆ ಆ ಮಕ್ಕಳ ಭವಿಷ್ಯದಲ್ಲಿ ಬದುಕಿನ ಬೆಳಕು ಮೂಡಲಿದೆ ಎಂಬ ಸಂದೇಶವನ್ನು ಸಿದ್ಧಾರ್ಥ ಆಸ್ಪತ್ರೆಯ ವೈದ್ಯರ ತಂಡ ನೀಡಿದೆ.
ಆಧುನಿಕ ಉಪಕರಣಗಳ ಅಳವಡಿಕೆಯೊಂದಿಗೆ, ನುರಿತ ಅನುಭವಿ ತಜ್ಞ ವೈದ್ಯರ ತಂಡ ತುಮಕೂರಿನಂತಹ ಪ್ರದೇಶದಲ್ಲಿಯೂ, ಅತಿ ಸೂಕ್ಷ್ಮ ರೀತಿಯ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು ಎಂಬುದನ್ನು ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ತಮೀಮ್ ನೇತೃತ್ವದ ವೈದ್ಯರ ತಂಡ ಸಾಬೀತುಪಡಿಸಿದೆ.
ಇದನ್ನೂ ಓದಿ: BMTC ಅಧಿಕಾರಿಗಳ ಸಾಮೂಹಿಕ ವರ್ಗಾವಣೆ: ಕೇಂದ್ರ ಕಚೇರಿಯ 18 ಮಂದಿ ಎತ್ತಂಗಡಿ; ಫೋರ್ಜರಿ ಸಹಿ ಬೆನ್ನಲ್ಲೇ ಕ್ರಮ
ಈ ಬಗ್ಗೆ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರಾದ ಡಾ.ಜಿ.ಪರಮೇಶ್ವರ ಸುದ್ದಿಗೋಷ್ಠಿ ನಡೆಸಿ ಪ್ರಶಂಸೆ ವ್ಯಕ್ತಪಡಿಸಿದರು. 150 ಹೆಚ್ಚು ಓಪನ್ ಹಾರ್ಟ್ ಸರ್ಜರಿ ಹಾಗೂ 3000ಕ್ಕೂ ಆಂಜಿಯೋಗ್ರಾಮ್ ನಡೆದಿದೆ. ಹೃದಯ ಸಮಸ್ಯೆ ಎಂದಾಗ ಬೆಂಗಳೂರಿಗೆ ಬರಬೇಕಿತ್ತು, ಇದರಿಂದ ತುಮಕೂರಿನ ಸುತ್ತಮುತ್ತ ಜನರಿಗೆ ಅನುಕೂಲವಾಗಿದೆ.