Site icon Vistara News

Accident | ಕಾರು, ಗೂಡ್ಸ್ ವಾಹನ ಡಿಕ್ಕಿ: ಕಾರು ಚಾಲಕ ಸಾವು

Accident

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದಲ್ಲಿ ಕಾರು ಹಾಗೂ ಬೊಲೆರೊ ಪಿಕ್ ಅಪ್ ಗೂಡ್ಸ್ ನಡುವೆ ಮಂಗಳವಾರ ರಾತ್ರಿ (ಸೆ.20) ಡಿಕ್ಕಿಯಾಗಿ (Accident) ಕಾರು ಚಾಲಕ ಮೃತಪಟ್ಟಿದ್ದಾರೆ.

ಸುಧೀರ ಸಿಂಧೆ(೨೯) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸುಧೀರ ಸಿಂಧೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಯಾಗಿದ್ದಾರೆ. ಸುಧೀರ ಸಿಂಧೆ ಚಿಕ್ಕಲಕಿ ಗ್ರಾಮದಿಂದ ಅಥಣಿಗೆ ಹೊರಟಿದ್ದರು. ಇದೇ ಸಂದರ್ಭದಲ್ಲಿ ಕಾರು ಹಾಗೂ ಬೊಲೆರೊ ಪಿಕ್ ಅಪ್ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಸಾವಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Accident | ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು, ಮುಗಿಲು ಮುಟ್ಟಿದ ಆಕ್ರಂದನ

Exit mobile version