ಬಾಗಲಕೋಟೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭಾರಿ ಗಾಳಿ ಮಳೆ ಆಗಿದೆ. ಬೀಳಗಿ ತಾಲೂಕಿನ ಕೂರ್ತಿ ಗ್ರಾಮದಲ್ಲಿ ಸಂತ್ರಸ್ತರ ಶೆಡ್‌ನ ಶೀಟ್‌ಗಳು ಹಾರಿ ಹೋಗಿವೆ.
ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನಲ್ಲಿ ಅನೇಕ ಗ್ರಾಮಗಳು ಮುಳುಗಡೆ ಆದವು. ಈ ಪೈಕಿ ಕೂರ್ತಿ ಗ್ರಾಮಗಳಲ್ಲಿದ್ದ ಸಂತ್ರಸ್ತರಿಗಾಗಿ ಬೀಳಗಿ ಬಳಿ ಪುನರ್ವಸತಿ ಕೇಂದ್ರ ಸ್ಥಾಪಿಸಿದೆ. ಶಾಶ್ವತ ವಸತಿಯ ಬದಲಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಮೂಲಸೌಕರ್ಯಗಳ ಕೊರತೆ ಸಾಕಷ್ಟಿದೆ.
ಬುಧವಾರದ ಮಳೆಗೆ ಬೀದಿ ಬದಿ ಮರಗಳು ಬಿದ್ದು ರಸ್ತೆ ಅಕ್ಕ-ಪಕ್ಕ ಇದ್ದ ನೂರಕ್ಕು ಅಧಿಕ ಶಡ್‌ಗಳ ತಗಡು ಧ್ವಂಸವಾಗಿವೆ. ರೈತರಿಗೆ ವಾಸಿಸಲು ಯೋಗ್ಯವಲ್ಲದ ಮನೆ ಕಟ್ಟಿತಸಿದ ಪರಿಣಾಮ ಮಳೆಗಾಲದಲ್ಲಿ ಸಂಕಷ್ಟ ತಂದೊಡ್ಡಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಹಾಳಾಗಿವೆ. ಕೂಡಲೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ,ಬೆಂಗಳೂರು,ಮೈಸೂರನ್ನು ತೊಯ್ದ ಭಾರೀ ಮಳೆ