ಬಾಗಲಕೋಟೆ: ಐತಿಹಾಸಿಕ ಲೋಕಾಪುರದ ಭಂಡಾರ ಜಾತ್ರೆಗೆ (Bhandara Fair) ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದೆ. ಲಕ್ಷಾಂತರ ಭಕ್ತರ ಸಮೂಹವು ಭಂಡಾರದಲ್ಲಿ ಮಿಂದೆದ್ದರು. ಮುಧೋಳ ನಗರದಲ್ಲಿ ಪ್ರತಿ 7 ವರ್ಷಕ್ಕೊಮ್ಮೆ ಲೋಕಾಪುರ ದುರ್ಗಾದೇವಿ ಜಾತ್ರೆ ನಡೆಯಲಿದೆ.
ಭಂಡಾರ ಜಾತ್ರೆಯಲ್ಲಿ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಇದಾಗಿದ್ದು, ಸುಮಾರು 27 ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ದೇವಿ ಜಾತ್ರೆ ಆಗಿದೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.
ಇನ್ನೂ ಆದಿ ಶಕ್ತಿ ದುರ್ಗಾದೇವಿ ರಥೋತ್ಸವಕ್ಕೆ 50 ಟನ್ ಭಂಡಾರವನ್ನು ಭಕ್ತರು ತೂರಲಿದ್ದಾರೆ. ಪಟ್ಟಣದ ರಥ ಬೀದಿ ಸೇರಿ ಪ್ರಮುಖ ಮಾರ್ಗಗಳಲ್ಲಿ ರಥೋತ್ಸವ ಸಂಚಾರಿಸಿದೆ. ಇನ್ನೂ ಯುವಕರು ಡೊಳ್ಳು ಕುಣಿತ, ಡಿಜೆ ಸದ್ದಿಗೆ ಭಂಡಾರ ಬಳಿದು ಹೆಜ್ಜೆ ಹಾಕಿದರು. ಕುಂಬ ಹೊತ್ತ ಸಾವಿರಾರು ಮಹಿಳೆರ ಮುಂಭಾಗ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆದಿದೆ.
ಟನ್ ಗಟ್ಟಲೆ ಭಂಡಾರ ಎರೆಚಿ ಜನರು ಸಂಭ್ರಮಿಸಿದರು. ದುರ್ಗವ್ವ ದೇವಿ ಓಣಿಯ ದೇವಸ್ಥಾನದಿಂದ ಭಂಡಾರ ಜಾತ್ರೆಯ ಮೆರವಣಿಗೆ ನಡೆಯಿತು. ದೇವಿಗೆ ಭಕ್ತರು ಉಡಿ ತುಂಬಿ ಪ್ರಾರ್ಥಿಸಿ ರಸ್ತೆ ಉದ್ದಕ್ಕೂ ಭಂಡಾರ ಎರಚುತ್ತಾ ದೇವಿಗೆ ಘೋಷಣೆ ಕೂಗುತ್ತಾ ಜಾತ್ರೆಯನ್ನು ಆಚರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ