Site icon Vistara News

Food Poisoning: ರೈಲಿನಲ್ಲಿ ವಿಷಾಹಾರ ಸೇವಿಸಿ 8 ಯುವಕರು ಅಸ್ವಸ್ಥ

food poison in train

ಬೆಳಗಾವಿ: ರೈಲ್ವೆ ಪ್ರಯಾಣದ ವೇಳೆ ವಿಷಾಹಾರ (Food Poisoning) ಸೇವಿಸಿ 8 ಜನ ಯುವಕರು ಅಸ್ವಸ್ಥರಾಗಿದ್ದಾರೆ. ಇವರು ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ಗೋವಾದಲ್ಲಿ ವಿಷಾಹಾರ ಸೇವಿಸಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿದೆ. ರೈಲು ಬೆಳಗಾವಿಗೆ (Belagavi news) ಬರುತ್ತಿದ್ದಂತೆ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲ ಎಂಟೂ ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಗಮಧ್ಯೆ ವಿಷಾಹಾರ ಸೇವಿಸಿದ್ದರಿಂದ ಹೀಗಾಗಿದೆ ಎಂಬ ಶಂಕೆ ಇದೆ.

ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು, ಇಬ್ಬರು ಯುವಕರು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಾಹಾರ ಸೇವಿಸಿದ ಎಲ್ಲರೂ ಉತ್ತರ ಪ್ರದೇಶದ ಝಾನ್ಸಿ ಮೂಲದವರೆಂಬ ಮಾಹಿತಿ ದೊರೆತಿದೆ. ಉದ್ಯೋಗ ‌ಅರಸಿ ಉತ್ತರ ಪ್ರದೇಶದಿಂದ ಗೋವಾಕ್ಕೆ ಬಂದಿದ್ದ ಯುವಕರು ಇವರಾಗಿದ್ದು, ಮರಳಿ ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ‌ತಮ್ಮೂರಿಗೆ ಮರಳುತ್ತಿದ್ದರು. ಜಿಲ್ಲಾಸ್ಪತ್ರೆಗೆ ‌ನಗರ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸರು ಭೇಟಿ, ನೀಡಿ‌ ಪರಿಶೀಲಿಸಿದ್ದಾರೆ.

ನಿಂತಿದ್ದ ಕಾರಿನಲ್ಲಿ ಬೆಂಕಿ, ಪ್ರಯಾಣಿಕರು ಪಾರು

ಬಾಗಲಕೋಟೆ: ನಿಂತಿದ್ದ ಕಾರಿನಲ್ಲಿ ಶಾರ್ಟ್ ಸರ್ಕಿಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ. ಬಾಗಲಕೋಟೆ (Bagalakote news) ನಗರದ ಬಸವೇಶ್ವರ ವೃತ್ತದ ಬಳಿ ಘಟನೆ ನಡೆದಿದೆ.

ಹನುಮಂತ ತುಮ್ಮರಮಟ್ಟಿ ಎಂಬವರಿಗೆ ಸೇರಿದ ಕಾರ್ ಇಲಕಲ್‌ನಿಂದ ಅಥಣಿ ಕಡೆಗೆ ತೆರಳುತ್ತಿದ್ದಾಗ, ದಿಢೀರ್ ಹೊಗೆ ಕಾಣಿಸಿಕೊಂಡಿದೆ. ಬೆನ್ನಲ್ಲೆ ಎಚ್ಚೆತ್ತು ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಪ್ರಯಾಣಿಕರು ಕಾರು ನಿಲ್ಲಿಸಿ ಉಪಹಾರಕ್ಕೆ ತೆರಳಿದ ವೇಳೆ ಹೀಗಾಗಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಬಾಗಲಕೋಟೆ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Chitradurga Accident: ಚಿತ್ರದುರ್ಗದಲ್ಲಿ ಯಮನ ಅಟ್ಟಹಾಸ; ಬಸ್-ಲಾರಿ ಡಿಕ್ಕಿಯಾಗಿ ನಾಲ್ವರ ಸಾವು

Exit mobile version