ಬಾಗಲಕೋಟೆ: ಬಾಗಲಕೋಟೆ (Baglkote News) ಜಿಲ್ಲೆಯ ಹುನಗುಂದ ತಾಲೂಕಿನ ಬಾನಂತಿ ಕೊಳ್ಳದ ಸಮೀಪ ವೇಗವಾಗಿ ಬಂದ ಟಿಪ್ಪರ್ ಲಾರಿ- ಕಾರಿನ ನಡುವೆ ಅಪಘಾತ (Road Accident) ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಛಿದ್ರಗೊಂಡಿದ್ದು, ಲಾರಿ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.
ಇನ್ನೂ ಕಾರಿನೊಳಗೆ ಇದ್ದ ಸಿದ್ದನಕೊಳ್ಳ ಡಾ.ಶಿವಕುಮಾರ್ ಶ್ರೀಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ಶ್ರೀಗಳೇ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ಗಾಯಗೊಂಡ ಡಾ.ಶಿವಕುಮಾರ್ ಶ್ರೀಗಳನ್ನು ಆಂಬ್ಯುಲೆನ್ಸ್ ಮೂಲಕ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಮಿನಗಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಅಮಿನಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Self Harming : ಸಾಲಬಾಧೆಗೆ ನೊಂದು ಮನೆಯೊಳಗೆ ನೇಣಿಗೆ ಕೊರಳೊಡ್ಡಿದ ಗೃಹಿಣಿ
ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್ ಮೇಲಿಂದ ಮಗುವನ್ನೇ ಎಸೆದ್ಳಾ?
ಕೊಚ್ಚಿ: ಹೆತ್ತ ತಾಯಿಯೊಬ್ಬಳು ಹಸುಗೂಸನ್ನು (Newly born Child) ಅಪಾರ್ಟ್‌ಮೆಂಟ್(Apartment)ನಿಂದ ಕೆಳಗೆಸೆದಿರುವಂತಹ ಆಘಾತಕಾರಿ ಘಟನೆ(Viral News) ಕೇರಳದ(Kerala) ಕೊಚ್ಚಿಯಲ್ಲಿ ನಡೆದಿದೆ. ಪಣಂಪುಲ್ಲಿನಗರದಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ವೊಂದರ ಪಕ್ಕದ ರಸ್ತೆಯಲ್ಲಿ ಬಟ್ಟೆ ಮತ್ತು ಕೊರಿಯರ್ ಪ್ಲಾಸ್ಟಿಕ್‌ನಲ್ಲಿ ಸುತ್ತಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು. ಇದನ್ನು ನೋಡಿದ ಜನ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದಾಗ ತಾಯಿಯೇ ಮಗುವನ್ನು ಎಸೆದಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಅಪಾರ್ಟ್‌ಮೆಂಟ್‌ನಿಂದ ಮಗುವನ್ನು ಎಸೆದಿರುವುದು ಸ್ಪಷ್ಟವಾಗಿದೆ. ಮೇಲಿನಿಂದ ಕೆಳಗೆ ಬಿದ್ದ ಮಗು ಸ್ಥಳದಲ್ಲೇ ಅಸುನೀಗಿದೆ. ತಕ್ಷಣ ಅಪಾರ್ಟ್‌ಮೆಂಟ್ ಒಳಗೆ ಹೋದ ಪೊಲೀಸರು 23ವರ್ಷದ ಮಹಿಳೆಯಯನ್ನು ಅರೆಸ್ಟ್ ಮಾಡಿದ್ದು, ಆಕೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಮುಂದಿನ ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಇನ್ನು ಮಹಿಳೆ ಹೆರಿಗೆಯಾದ ಮೂರು ಗಂಟೆಗಳ ನಂತರ ಗಾಬರಿಯಲ್ಲಿ ಮಗುವನ್ನು ಬಟ್ಟೆಯಲ್ಲಿ, ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಮಹಿಳೆ ಅಪಾರ್ಟ್‌ಮೆಂಟ್‌ನಿಂದ ಎಸೆದಿದ್ದಾಳೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಮಹಿಳೆ ಅತ್ಯಾಚಾರ ಸಂತ್ರಸ್ತೆ ಎಂಬ ಶಂಕೆ
ವಿಚಾರಣೆ ಆರಂಭಿಸಿರುವ ಪೊಲೀಸರು ಮಹಿಳೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆ ಈ ಕೃತ್ಯ ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಕೃತ್ಯದ ಹಿಂದಿರುವ ನಿಜವಾದ ಉದ್ದೇಶ ಬಯಲಾಗಲಿದೆ. ಒಂದು ವೇಳೆ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಇನ್ನು ಆರೋಪಿ ಮಹಿಳೆ ಗರ್ಭಿಣಿಯಾಗಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದಿರಲಿಲ್ಲ. ಅವರಿಗೂ ಈ ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇಂತಹದ್ದೇ ಒಂದು ಘಟನೆ ಎರಡು ತಿಂಗಳ ಹಿಂದೆ ಮಡಿಕೇರಿಯ ಸುಂಠಿಕೊಪ್ಪದಲ್ಲಿ ನಡೆದಿತ್ತು. ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ನವಜಾತ ಶಿಶುವಿನ ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಹೆತ್ತ ತಾಯಿಯೇ ಮಗುವನ್ನು ಕತ್ತು ಹಿಸುಕಿ ಕೊಂದು ನಂತರ ಮಣ್ಣಿನಲ್ಲಿ ಹೂತಿರುವುದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಸುಂಟಿಕೊಪ್ಪ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತರನ್ನು ಗದ್ದೆಹಳ್ಳ ಗಿರಿಯಪ್ಪ ಮನೆ ಗದ್ದೆಯಲ್ಲಿ ವಾಸವಾಗಿರುವ ಕುಮಾರ ಮತ್ತು ಆತನ ತಾಯಿ ಯಮುನಾ ಎಂದು ಗುರುತಿಸಲಾಗಿದೆ. ಇವರು ಆಗಷ್ಟೇ ಹುಟ್ಟಿದ ಮಗುವಿನ ಕತ್ತು ಹಿಸುಕಿ ಸಾಯಿಸಿ ನಂತರ ಹೂತು ಹಾಕಿರುವುದನ್ನು ಪೋಲೀಸರ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದರು.
ವಿವಾಹಿತನಾಗಿರುವ ಕುಮಾರನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತ ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ ಒಬ್ಬಳ ಜತೆ ಅಕ್ರಮ ಸಂಬಂಧ ಇರಿಸಿದ್ದು ಇದರ ಫಲವಾಗಿ ಆಕೆ ತುಂಬು ಗರ್ಭಿಣಿಯಾಗಿದ್ದಳು. ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಕುಮಾರ ಮತ್ತು ಅವನ ತಾಯಿ ನವಜಾತ ಶಿಶುವಿನ ಕತ್ತುಹಿಸುಕಿ ಅದರ ಜೀವ ಕಿತ್ತುಕೊಂಡಿದ್ದರು. ಮರುದಿನ ಮುಂಜಾನೆ ಕುಮಾರ ಮತ್ತು ಯಮುನಾ ರಸ್ತೆ ಬದಿಯ ಗದ್ದೆಯಲ್ಲಿ ಗುಂಡಿ ತೋಡಿ ನವಜಾತ ಶಿಶುವನ್ನು ಹೂತಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ