Site icon Vistara News

Rooftop collapse : ಕುಸಿದು ಬಿದ್ದ ಮನೆಯ ಚಾವಣಿ; ಮಣ್ಣಿನಡಿ ಸಿಲುಕಿ ಮಕ್ಕಳಿಬ್ಬರು ಸಾವು

Rooftop collapse in bagalakota

ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ (Rooftop collapse) ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು.

40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.

ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದರು. ಬಾಗಲಕೋಟೆಯ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಇದನ್ನೂ ಓದಿ: Viral Video: ತನ್ನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಅಪಹರಣಕ್ಕೆ ಯತ್ನ; ಕತ್ತಿ ಝಳಪಿಸಿ ಕಿಡಿಗೇಡಿಯ ಅಟ್ಟಹಾಸ-ವಿಡಿಯೋ ಇದೆ

ಕಂದಕಕ್ಕೆ ಉರುಳಿದ ಬಸ್‌; 9 ಜನ ಬಲಿ; 40 ಜನರಿಗೆ ಗಂಭೀರ ಗಾಯ

ಜಮ್ಮು-ಕಾಶ್ಮೀರ: ಯಾತ್ರಿಕರಿದ್ದ ಬಸ್‌(Bus)ವೊಂದು ಬೆಟ್ಟದ ಮೇಲಿನಿಂದ ಉರುಳಿ ಬಿದ್ದಿದ್ದು(Bus Accident), 9 ಜನ ಮೃತಪಟ್ಟಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ. ಜಮ್ಮು-ಕಾಶ್ಮೀರ(Jammu-Kashmir)ದ ಚೌಕಿ ಚೌರಾ ಟುಗಿ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಲಿಧಾರ್‌ ಪ್ರದೇಶದಲ್ಲಿ ಬೆಟ್ಟ ಮೇಲೆ ಚಲಿಸುತ್ತಿದ್ದ ಬಸ್‌ ಏಕಾಏಕಿ ಸ್ಕಿಡ್‌ ಆಗಿ 150 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ಈ ಬಸ್‌ ಕುರುಕ್ಷೇತ್ರದಿಂದ ಶಿವಖೋರಿಗೆ ಪ್ರಯಾಣಿಸುತ್ತಿತ್ತು.

ಇನ್ನು ಘಟನೆಯಲ್ಲಿ ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಜಮ್ಮುವಿನ GMC ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಕೆಲವು ಗಾಯಾಳುಗಳನ್ನು ಚೌಕಿ ಚೌರ ಆಸ್ಪತ್ರೆ ಮತ್ತು ಅಖ್ನೂರ್‌ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಝಜ್ಜರ್​ ಕೊಟ್ಲಿ ಸಮೀಪ ಇತ್ತೀಚೆಗೆ ಬಸ್​ ಪಲ್ಟಿಯಾಗಿದ್ದು , 10 ಜನರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 75 ಪ್ರಯಾಣಿಕರನ್ನು ಹೊತ್ತ ಬಸ್​, ಪಂಜಾಬ್​ನ ಅಮೃತ್​ಸರ್​​ದಿಂದ ಕಾತ್ರಾಕ್ಕೆ ಹೋಗುತ್ತಿತ್ತು. ಕೊಟ್ಲಿ ಬಳಿ ಈ ಬಸ್​ ಕಂದಕಕ್ಕೆ ಉರುಳಿಬಿದ್ದಿತ್ತು. ಸೇತುವೆ ಮೇಲಿಂದ ಬಿದ್ದಿದ್ದು, ಬಸ್​ ಜಖಂ ಆಗಿದೆ. ಕಾತ್ರಾಕ್ಕೆ ಹೊರಟಿದ್ದ ಈ ಬಸ್​ನಲ್ಲಿ ಅನೇಕರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲಿದ್ದ ಭಕ್ತರೇ ಇದ್ದರು. ಬಹುತೇಕರು ಬಿಹಾರದವರು ಇದ್ದರು. ಆದರೆ ಕಾತ್ರಾ ಇರುವ ರಿಯಾಸಿ ಜಿಲ್ಲೆಯಿಂದ 15 ಕಿಮೀ ದೂರದಲ್ಲಿ, ಕೋಟ್ಲಿ ಬಳಿ ಅಪಘಾತಕ್ಕೀಡಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version