Site icon Vistara News

25ನೇ ದಿನಕ್ಕೆ ಕಾಲಿಟ್ಟ ಮಹಾಲಿಂಗಪುರ ತಾಲೂಕು ಹೋರಾಟ: ಬೆಂಗಳೂರಲ್ಲಿ ಇಂದು ಸಿಎಂ ಭೇಟಿ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರವನ್ನು ತಾಲೂಕು ಎದು ಘೋಷಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದೆ.

ಮಹಾಲಿಂಗಪುರ ಪಟ್ಟಣವನ್ನು ನೂತನ ತಾಲೂಕು ಎಂದು ಘೋಷಿಸಬೇಕು ಅಥವಾ ಈ ಹಿಂದಿನಂತೆಯೇ ಮುಧೋಳ ತಾಲೂಕಿನಲ್ಲಿಯೇ ಉಳಿಸಲಿ. ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ ತಾಲೂಕು ರಚನೆ ಮಾಡಬಹುದು. ಆದರೆ ಮಹಲಿಂಗಪುರ ಮತ್ತು ಸುತ್ತಲಿನ ಗ್ರಾಮಗಳನ್ನು ತೇರದಾಳ ತಾಲೂಕಿಗೆ ಸೇರಿಸುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ಸರ್ಕಾರ ಅಂತಹ ನಿರ್ಧಾರ ಕೈಗೊಂಡರೆ ಜೀವ ಕೊಡಲೂ ಸಿದ್ಧ ಎಂದು ಮಹಾಲಿಂಗಪ್ಪ ಕೋಳಿಗುಡ್ಡ ಅಧ್ಯಕ್ಷತೆಯ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಹೋರಾಟ ಕೊನೆಗಾಣುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಲು ಸಿಎಂ ಬಸವರಾಜ ಬೊಮ್ಮಾಐಇ ಸಮ್ಮತಿಸಿದ್ದಾರೆ. ಸಂಜೆ 4 ಗಂಟೆಗೆ ಮಹಾಲಿಂಗಪುರ ಹೋರಾಟ ಸಮಿತಿ ನಿಯೋಗ ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡಲಿದೆ. ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸಿಎಂ ಭೇಟಿ ನಡೆಯಲಿದೆ..

ಇದನ್ನೂ ಓದಿ: ಕೋಲಾರ, ಮಂಡ್ಯ ಭಾಗದಿಂದ ಬಿಜೆಪಿ ಹೆಚ್ಚು ಜನ ಬರುತ್ತಿದ್ದಾರೆ: ಅಚ್ಚರಿ ಮೂಡಿಸಿದ CM ಬೊಮ್ಮಾಯಿ –

Exit mobile version