ಬೆಂಗಳೂರು: ನೀವೇನಾದರೂ ಬಜಾಜ್ ಫೈನಾನ್ಸ್ (Bajaj Card) ಕಾರ್ಡ್ ಹೊಂದಿದ್ದರೆ ಕೊಂಚ ಎಚ್ಚರವಾಗಿರಿ. ಕಾರ್ಡ್ ಹಳೆಯದಾಗಿದೆ ಎಂದು ಸುಮ್ಮನಾಗಬೇಡಿ. ಯಾಕೆಂದರೆ ನಿಮ್ಮದೆ ಬಜಾಜ್ ಕಾರ್ಡ್‌ನಲ್ಲಿ ಶಾಪಿಂಗ್ ಮಾಡುವ ವಂಚಕರು ಇದ್ದಾರೆ.
ಬಜಾಜ್ ಫೈನಾನ್ಸ್ ಕೆಲಸಗಾರನಿಂದಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಪೊಲೀಸರು ಖತರ್ನಾಕ್ ಆರೋಪಿಯನ್ನು ಬಂಧಿಸಿದ್ದಾರೆ. ವಿಕಾಸ್ ಬಂಧಿತ ಆರೋಪಿ. ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನು ಟಾರ್ಗೆಟ್ ಮಾಡುವ ಈ ಆರೋಪಿ ಗ್ರಾಹಕರ ವಿವರಗಳನ್ನು ಕೊಟ್ಟು ಹೊಸ ಸಿಮ್ ಖರೀದಿ ಮಾಡುತ್ತಿದ್ದ. ನಂತರ ಅದೇ ಸಿಮ್ ಕಾರ್ಡ್ ಬಳಸಿ ಬಜಾಜ್ ಕಾರ್ಡ್ ಖರೀದಿ ಮಾಡುತ್ತಿದ್ದ.
ಕಾರ್ಡ್ ಮೂಲಕ ಅಮೇಜಾನ್‌ನಲ್ಲಿ ಬೆಲೆಬಾಳುವ ಮೊಬೈಲ್ ಖರೀದಿ ಮಾಡಿ, ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಮಾಡಿ ಬರೊಬ್ಬರಿ 14 ಲಕ್ಷ ರೂ. ಹಣವನ್ನು ಯಮಾರಿಸಿದ್ದಾನೆ. ಬಜಾಜ್ ಕಂಪನಿಯ ದೂರಿನ ಮೇರೆಗೆ ಆರೋಪಿ ವಿಕಾಸ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ವಿಚಾರಣೆ ವೇಳೆ ಪುಣೆಯ ವಿಮಂತಲ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಅಲ್ಲೂ ಇದೇ ರೀತಿ ವಂಚಿಸಿದ್ದ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಬಜಾಜ್ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಕೇಂದ್ರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Bear Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ರೈತನ ಮೇಲೆ ಎರಗಿದ ಕರಡಿಗಳು; ಪ್ರಾಣಾಪಾಯದಿಂದ ಪಾರು