Site icon Vistara News

Bajaranga dal : ಶಿವಮೊಗ್ಗದಲ್ಲಿ ಬಜರಂಗ ದಳದಿಂದ ಕೇಸರಿ ಧ್ವಜಸ್ತಂಭ ಸ್ಥಾಪನೆ, ಬೃಹತ್‌ ವಾಹನ ರ‍್ಯಾಲಿ

#image_title

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ತುಂಗಾ ಪ್ರಖಂಡ ವತಿಯಿಂದ ಶಿವಮೊಗ್ಗ ನಗರದ ಗೋಪಾಲಗೌಡ ಕೊನೆ ಬಸ್‌ ನಿಲ್ದಾಣದಲ್ಲಿ ಭಜರಂಗ ದಳದ ವತಿಯಿಂದ ನಿರ್ಮಿಸಲಾಗಿರುವ ೨೫ ಅಡಿ ಎತ್ತರದ ಧ್ವಜ ಸ್ತಂಭವನ್ನು ಧ್ವಜ ಹಾರಿಸುವ ಮೂಲಕ ಭಾನುವಾರ ಉದ್ಘಾಟಿಸಲಾಯಿತು. ಬಜರಂಗ ದಳ ವತಿಯಿಂದ ಸ್ಥಾಪಿಸಲಾದ ಮೊದಲ ಧ್ವಜ ಸ್ತಂಭ ಇದಾಗಿದ್ದು, ಇದರಲ್ಲಿ ನಿರಂತರವಾಗಿ ಕೇಸರಿ ಬಾವುಟ ಹಾರಲಿದೆ ಎಂದು ಘೋಷಿಸಲಾಯಿತು. ಬಳಿಕ ದೊಡ್ಡ ಮಟ್ಟದ ವಾಹನ ರ‍್ಯಾಲಿ ನಡೆಯಿತು.

ತುಂಗಾ ಪ್ರಖಂಡ ನಗರ ಸಂಚಾಲಕ ಜಿತೇಂದ್ರ ನೇತೃತ್ವದಲ್ಲಿ ಈ ಧ್ವಜ ಸ್ತಂಭ ಸ್ಥಾಪನೆ ಮಾಡಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ಹಿಂದು ಪರಿಷತ್‌ನ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್‌ ಭಾಗವಹಿಸಿದ್ದರು.

ಶರಣ್‌ ಪಂಪ್‌ ವೆಲ್‌ ಅವರನ್ನು ನಗರದ ಹರಕೆರೆ ಈಶ್ವರ ದೇವಾಲಯದ ಬಳಿ ಸ್ವಾಗತಿಸಿ ತೆರೆದ ವಾಹನದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ಬಜರಂಗ ದಳದ ಹಿರಿಯ ನಾಯಕರಾದ ವಡಿವೇಲು, ರಾಜೇಶ್ ಗೌಡ, ಅಂಕುಶ್‌, ಸಚಿನ್‌ ರಾಯ್ಕರ್ ಮೊದಲಾದ ಹಲವರು ಭಾಗವಹಿಸಿದ್ದರು.

ಬೃಹತ್‌ ವಾಹನ ರ‍್ಯಾಲಿ
ಗಾಜನೂರು ರಸ್ತೆಯ ಹರಕೆರೆ ದೇವಸ್ಥಾನದಿಂದ ಗೋಪಾಳ ವಿನಾಯಕ ಸರ್ಕಲ್ ವರೆಗೆ ದೊಡ್ಡ ಮಟ್ಟದ ವಾಹನ ರ‍್ಯಾಲಿ ನಡೆಯಿತು. ಗಜಾನನ ಗೇಟ್ -ನ್ಯೂ ಮಂಡ್ಲಿ ಸರ್ಕಲ್- 60 ಅಡಿ ರಸ್ತೆ ಮೂಲಕ ಇಲಿಯಾಸ್ ನಗರ – ತುಂಗಾನಗರ ಠಾಣೆ ಮುಂಭಾಗದ ರಸ್ತೆ- ಗೋಪಾಳ- ವಿನಾಯಕ ಸರ್ಕಲ್‌ ವರೆಗೆ ಸುಮಾರು ೨.೫ ಕಿ.ಮೀ. ಸಂಚರಿಸಿದ ರ‍್ಯಾಲಿಯಲ್ಲಿ ನೂರಕ್ಕೂ ಅಧಿಕ ಬೈಕ್‌ ಮತ್ತು ಪ್ಯಾಸೆಂಜರ್‌ ಆಟೊಗಳು ಭಾಗವಹಿಸಿದ್ದವು.

ಧ್ವಜ ಸ್ತಂಭ ಉದ್ಘಾಟನೆ

ಎಲ್ಲಾ ಬೈಕುಗಳಲ್ಲಿ ಹಾಗೂ ಆಟೋ ಕಾರುಗಳಲ್ಲಿ ಅಳವಡಿಸಲಾಗಿದ್ದು,ದೊಡ್ಡದಾದ ಕೇಸರಿ ಭಗವಾಧ್ವಜವನ್ನು ಕಾರ್ಯಕರ್ತರು ಕೈಯಲ್ಲಿ ರಾರಾಜಿಸಿದವು. ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳ ಈ ರ‍್ಯಾಲಿಯನ್ನು ಆಯೋಜಿಸಿದ್ದವು.

ಇದನ್ನೂ ಓದಿ : Shivamogga Airport : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿಎಸ್‌ವೈ ಪುನರುಚ್ಚಾರ

Exit mobile version