ಶಿವಮೊಗ್ಗ: ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಕಾರ್ಯಕ್ರಮವನ್ನು (Bajrang Dal Raid) ತಡೆದಿದ್ದಾರೆ. ಹೋಟೆಲ್ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಪೊಲೀಸರ ಸಮ್ಮುಖದಲ್ಲಿ ಕಾರ್ಯಕ್ರಮ ತಡೆದು ಮಹಿಳೆಯರನ್ನು ಹೊರಗೆ ಕಳುಹಿಸಿದ್ದಾರೆ.
ಕ್ಲಿಫ್ ಎಂಬಸಿ ಹೋಟೆಲ್‌ನ ಹೈವ್ ಸ್ಕೈ ಬಾರ್‌ನಲ್ಲಿ ಲೇಡಿಸ್ ನೈಟ್ ಪಾರ್ಟಿ ಆಯೋಜಿಸಲಾಗಿತ್ತು. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು, ಹೋಟೆಲ್ ಬಳಿ ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿ ಪಾರ್ಟಿಗೆ ತಡೆ ನೀಡಿದ್ದಾರೆ. ಹೆಣ್ಣು ಮಕ್ಕಳನ್ನು ಕರೆಯಿಸಿ ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಜರಂಗದಳ ಆರೋಪಿಸಿದೆ.
ಇದನ್ನೂ ಓದಿ | Assault Case: ಹೇರ್ ಕಟಿಂಗ್ ನಾಳೆ ಮಾಡ್ತಿನಿ ಎಂದಿದ್ದಕ್ಕೆ ಶಾಪ್‌ನೊಳಗಿದ್ದ ವಸ್ತುಗಳನ್ನು ಕೆರೆಗೆ ಎಸೆದ ದುರುಳರು
ಬಜರಂಗದಳದ ಮುಖಂಡ ರಾಜೇಶ್ ಗೌಡ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಶಿವಮೊಗ್ಗದಲ್ಲಿ ಅವಕಾಶ ಕೊಡಲ್ಲ. ಮಲೆನಾಡಿನ ಜನರು ಸುಸಂಸ್ಕೃತರು, ಇಂತಹ ಕಾರ್ಯಕ್ರಮ ಆಯೋಜಿಸಿದರೆ ಸುಮ್ಮನಿರುವುದಿಲ್ಲ. ಲೇಟ್ ನೈಟ್ ಲೇಡಿಸ್ ಪಾರ್ಟಿ ಬಗ್ಗೆ ಈ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದೆವು. ಆದ್ದರಿಂದ ಪೊಲೀಸರ ಜತೆ ಬಂದು ಕಾರ್ಯಕ್ರಮ ನಿಲ್ಲಿಸಿದ್ದೇವೆ ಎಂದು ತಿಳಿಸಿದರು.