Site icon Vistara News

Karnataka election 2023: ನೀತಿ ಸಂಹಿತೆ ಉಲ್ಲಂಘನೆ; ಬಳ್ಳಾರಿಯಲ್ಲಿ 1,076 ಪ್ರಕರಣ ದಾಖಲು

Ballari DC pavan kumar malapati statement

ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣಾ (Karnataka election 2023) ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ, ಮೇ 11 ರವರೆಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 1,79,78,927 ರೂ. ನಗದು ಮೊತ್ತ, 35,91,550 ರೂ. ಮೌಲ್ಯದ ವಿವಿಧ ಉಡುಗೊರೆ ಸಾಮಗ್ರಿ, 19,150 ರೂ. ಮೌಲ್ಯದ 1.09 ಕೆ.ಜಿ ಮಾದಕ ವಸ್ತು, 56,86,321 ರೂ. ಮೌಲ್ಯದ 16,694.448 ಲೀಟರ್ ಮದ್ಯ ಸೇರಿ 2,72,75,948 ರೂ. ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದ್ದು, ವಿವಿಧ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 1,076 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಚೆಕ್‍ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ವೇಳೆ, ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ, ಚಿನ್ನಾಭರಣ, ಉಡುಗೊರೆ, ಮದ್ಯ ಹಾಗೂ ಮಾದಕ ವಸ್ತು ಸೇರಿದಂತೆ ಸಾಗಾಣಿಕೆಗೆ ಬಳಸಿಕೊಂಡಿದ್ದ ವಾಹನಗಳನ್ನು ವಶಪಡಿಕೊಳ್ಳಲಾಗಿದೆ.

ಇದನ್ನೂ ಓದಿ: Italy To Ban English: ಇಟಲಿಯಲ್ಲಿ ಇಟಾಲಿಯನ್‌ ಭಾಷೆಯೇ ಸಾರ್ವಭೌಮ, ಇಂಗ್ಲಿಷ್‌ ನಿಷೇಧಕ್ಕೆ ದಿಟ್ಟ ಹೆಜ್ಜೆ

ಅಬಕಾರಿ ಕಾನೂನು ಉಲ್ಲಂಘನೆ ಅಡಿಯಲ್ಲಿ ಅಬಕಾರಿ ಉಲ್ಲಂಘನೆಗೆ ಸಂಬಂಧಿಸಿದಂತೆ 1,039 ಪ್ರಕರಣಗಳಡಿ ಎಫ್‍ಐಆರ್ ದಾಖಲಾಗಿದೆ. ಈ ಪೈಕಿ 961 ಅಬಕಾರಿ ಇಲಾಖೆಯಿಂದ ಹಾಗೂ 78 ಪ್ರಕರಣಗಳು ಪೊಲೀಸ್ ಇಲಾಖೆಯಿಂದ ಎಫ್‍ಐಆರ್ ದಾಖಲಾಗಿದೆ. ಅಲ್ಲದೆ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ 37 ಎಫ್‍ಐಆರ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ದಾಖಲಾಗಿದ್ದು, ಹೀಗಾಗಿ ಒಟ್ಟು 1076 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾದಂತಾಗಿದೆ.

ಕಂಪ್ಲಿ ಕ್ಷೇತ್ರ

ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 11,82,190 ರೂ. ನಗದು, 2,750 ರೂ. ಮೌಲ್ಯದ 11 ಸೀರೆ, ಅಬಕಾರಿ ಇಲಾಖೆಯಿಂದ 3,17,089 ರೂ. ಮೌಲ್ಯದ 706.19 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 1,26,685 ರೂ. ಮೌಲ್ಯದ 276.21 ಲೀಟರ್ ಮದ್ಯ ಸೇರಿ ಒಟ್ಟು 4,43,774 ರೂ. ಮೌಲ್ಯದ 982.4 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿದ 15 ವಾಹನಗಳು ವಶಪಡಿಸಿಕೊಂಡಿದ್ದು, ಅಬಕಾರಿ ಕಾನೂನು ಉಲ್ಲಂಘನೆ ಅಡಿ ಒಟ್ಟು 240 ಪ್ರಕರಣಗಳನ್ನು ದಾಖಲಿಸಲಾಗಿದೆ. ಮತ್ತು ಚುನಾವಣಾ ವೆಚ್ಚ ಸಂಬಂಧ 5 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮೌಲ್ಯ 16,28,714 ರೂ.ಗಳಾಗಿದೆ.

ಸಿರುಗುಪ್ಪ ಕ್ಷೇತ್ರ

ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 41,19,512 ರೂ. ನಗದು, 61,000 ರೂ. ಮೌಲ್ಯದ 61 ಸೀರೆಗಳು, ಅಬಕಾರಿ ಇಲಾಖೆಯಿಂದ 5,11,858 ರೂ. ಮೌಲ್ಯದ 1215.41 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 1,17,167 ರೂ. ಮೌಲ್ಯದ 295.2 ಲೀಟರ್ ಮದ್ಯ ಸೇರಿ ಒಟ್ಟು 6,29,025 ರೂ. ಮೌಲ್ಯದ 1510.61 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿದ 18 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾನೂನು ಉಲ್ಲಂಘನೆ ಅಡಿ ಒಟ್ಟು 182 ಪ್ರಕರಣಗಳನ್ನು ದಾಖಲಿಸಲಾಗಿದೆ. ಚುನಾವಣಾ ವೆಚ್ಚ ಸಂಬಂಧ 6 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮೌಲ್ಯ 48,09,537 ರೂ. ಗಳಾಗಿದೆ.

ಇದನ್ನೂ ಓದಿ: IPL 2023: ಅಗ್ರಸ್ಥಾನಿ ಗುಜರಾತ್​ಗೆ ಸಡ್ಡು ಹೊಡೆದೀತೇ ಮುಂಬೈ?

ಬಳ್ಳಾರಿ ಗ್ರಾಮೀಣ ಕ್ಷೇತ್ರ

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 40,46,335 ರೂ. ನಗದು, 23,700 ರೂ. ಮೌಲ್ಯದ 650 ಕೋಳಿಗಳು, 10,650 ರೂ. ಮೌಲ್ಯದ 0.71 ಕೆ.ಜಿ ಮಾದಕ ವಸ್ತು, ಅಬಕಾರಿ ಇಲಾಖೆಯಿಂದ 8,37,336 ರೂ. ಮೌಲ್ಯದ 1949.88 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 1,26,187 ರೂ. ಮೌಲ್ಯದ 170.36 ಲೀಟರ್ ಮದ್ಯ ಸೇರಿ ಒಟ್ಟು 9,63,523 ರೂ. ಮೌಲ್ಯದ 2120.24 ಲೀಟರ್ ಮದ್ಯ ಹಾಗೂ 17 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾನೂನು ಉಲ್ಲಂಘನೆ ಅಡಿ ಒಟ್ಟು 229 ಪ್ರಕರಣಗಳನ್ನು ದಾಖಲಿಸಲಾಗಿದೆ. ಮತ್ತು ಚುನಾವಣಾ ವೆಚ್ಚ ಸಂಬಂಧ 7 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮೌಲ್ಯ 50,44,208 ರೂಪಾಯಿಗಳಾಗಿದೆ.

ಬಳ್ಳಾರಿ ನಗರ ಕ್ಷೇತ್ರ

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 49,15,030 ರೂ. ನಗದು, 35,04,100 ರೂ. ಮೌಲ್ಯದ 4866 ಗ್ರಾಂ ಬೆಳ್ಳಿ, 566.71 ಗ್ರಾಂ ಚಿನ್ನ, 04 ವೈಟ್ ಸ್ಟೋನ್, ರಾಜಕೀಯ ಪಕ್ಷವೊಂದರ 3,400 ಕರಪತ್ರಗಳು ವಶ ಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 32,29,747 ರೂ. ಮೌಲ್ಯದ 11101.638 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 49,305 ರೂ. ಮೌಲ್ಯದ 112.05 ಲೀಟರ್ ಮದ್ಯ ಸೇರಿ ಒಟ್ಟು 32,79,052 ರೂ. ಮೌಲ್ಯದ 11213.688 ಲೀಟರ್ ಮದ್ಯ ಹಾಗೂ 11 ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಅಬಕಾರಿ ಕಾನೂನು ಉಲ್ಲಂಘನೆ ಅಡಿ ಒಟ್ಟು 169 ಪ್ರಕರಣಗಳನ್ನು ದಾಖಲಿಸಲಾಗಿದೆ. ಮತ್ತು ಚುನಾವಣಾ ವೆಚ್ಚ ಸಂಬಂಧ 14 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮೌಲ್ಯ 1,16,98,182 ರೂ. ಗಳಾಗಿದೆ.

ಇದನ್ನೂ ಓದಿ: Antonio Carbajal: ಮೆಕ್ಸಿಕೋ ಫುಟ್ಬಾಲ್ ದಂತಕಥೆ ಆಂಟೋನಿಯೊ ಕಾರ್ಬಜಾಲ್ ನಿಧನ

ಸಂಡೂರು ಕ್ಷೇತ್ರ

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 37,15,860 ರೂ. ನಗದು, 8,500 ರೂ. ಮೌಲ್ಯದ 0.38 ಕೆ.ಜಿ ಮಾದಕ ವಸ್ತು, ಅಬಕಾರಿ ಇಲಾಖೆಯಿಂದ 2,85,033 ರೂ. ಮೌಲ್ಯದ 650.27 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 85,914 ರೂ. ಮೌಲ್ಯದ 217.24 ಲೀಟರ್ ಮದ್ಯ ಸೇರಿ ಒಟ್ಟು 3,70,947 ರೂ. ಮೌಲ್ಯದ 867.51 ಲೀಟರ್ ಮದ್ಯ ಹಾಗೂ 12 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾನೂನು ಉಲ್ಲಂಘನೆ ಅಡಿ ಒಟ್ಟು 219 ಪ್ರಕರಣಗಳನ್ನು ದಾಖಲಿಸಲಾಗಿದೆ. ಮತ್ತು ಚುನಾವಣಾ ವೆಚ್ಚ ಸಂಬಂಧ 5 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮೌಲ್ಯ 40,95,307 ರೂ. ಗಳಾಗಿದೆ.

ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ (ಮೇ 11) ಜಿಲ್ಲೆಯಲ್ಲಿ ಒಟ್ಟಾರೆ 1,79,78,927 ರೂ. ನಗದು, 35,91,550 ರೂ. ಮೌಲ್ಯದ ವಿವಿಧ ಉಡುಗೊರೆ ಸಾಮಗ್ರಿಗಳು, 4866 ಗ್ರಾಂ ಬೆಳ್ಳಿ ಮತ್ತು 566.71 ಗ್ರಾಂ ಚಿನ್ನ, 04 ವೈಟ್ ಸ್ಟೋನ್, ರಾಜಕೀಯ ಪಕ್ಷವೊಂದರ 3,400 ಕರಪತ್ರಗಳು ವಶಪಡಿಕೊಳ್ಳಲಾಗಿದೆ.

ಇದನ್ನೂ ಓದಿ: Samantha Ruth Prabhu: ಒಟಿಟಿಗೆ ಬಂತು ಸಮಂತಾ ಅಭಿನಯದ `ಶಾಕುಂತಲಂ’ ಸಿನಿಮಾ

ಅಬಕಾರಿ ಇಲಾಖೆಯಿಂದ 51,81,063 ರೂ.ಮೌಲ್ಯದ 15623.388 ಲೀಟರ್ ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ 5,05,258 ರೂ. ಮೌಲ್ಯದ 1071.61 ಲೀಟರ್ ಮದ್ಯ ಸೇರಿ ಒಟ್ಟು 56,86,321 ರೂ. ಮೌಲ್ಯದ 16694.448 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿಕೊಂಡಿದ್ದ ಒಟ್ಟು 73 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೂಕ್ತ ದಾಖಲೆಯಿಲ್ಲದೇ ವಶಪಡಿಸಿಕೊಂಡಿದ್ದ 3,40,170 ರೂ. ನಗದು ಮೊತ್ತವನ್ನು ವಿಚಾರಣೆ ನಂತರ ಹಣವನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Exit mobile version